ಕೈರೊ : ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರರ ಹಿಂಸೆ ಪರಾಕಾಷ್ಠೆ ತಲುಪಿದ್ದು, ಮತ್ತೊಂದು ಹಿಂಸಾಕಾಂಡದಲ್ಲಿ ಲಿಬಿಯಾದ 21 ಮಂದಿ ಕ್ರೈಸ್ತರನ್ನು ಕಡಲ ತೀರವೊಂದರಲ್ಲಿ ಐಸಿಸ್ ಭಯೋತ್ಪಾದಕರು ಅತ್ಯಂತ ಭೀಕರವಾಗಿ ಸಾಮೂಹಿಕ ಶಿರಚ್ಛೇಧನ ಮಾಡಿದ್ದಾರೆ. ಈ ಭಯಾನಕ ಕೃತ್ಯವನ್ನು ಸಿನಿಮಾ ರೀತಿಯಲ್ಲಿ ಚಿತ್ರೀಕರಣ ಮಾಡಿ ಆ ವೀಡಿಯೋ ದೃಶ್ಯವನ್ನು ಈಜಿಪ್ಟ್ ಸರ್ಕಾರಕ್ಕೆ ರವಾನಿಸಿದೆ.

isis

ವಿಶ್ವವೇ ನಡುಗಿ ಹೋಗಿದೆ. ಐಎಸ್‌ಐಎಸ್ ಭಯೋತ್ಪಾದಕರ ಈ ಕೃತ್ಯದಿಂದ ನೊಂದಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್-ಎಲ್-ಸಿಸಿ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದ್ದಾರೆ.ಈ 21 ಮಂದಿಯನ್ನು ನಾವು ಲಿಬಿಯಾದಲ್ಲಿ ಅಪಹರಿಸಿದ್ದು, ಇವರನ್ನೆಲ್ಲ ಸಾಮೂಹಿಕವಾಗಿ ತಲೆ ಕತ್ತರಿಸುತ್ತದ್ದೇವೆ. ಈ ದೃಶ್ಯವನ್ನು ವಿಶ್ವವೇ ಕಾಣಬೇಕು ಎಂದು ವೀಡಿಯೋದಲ್ಲಿ ಹೇಳಲಾಗಿದೆ.

ಲಿಬಿಯಾದ ರಾಜಧಾನಿ ಟ್ರಿಪೊಲಿಯಕಡಲತೀರದಲ್ಲಿ 21 ಮಂದಿ ಅಪಹೃತ ಕ್ರೈಸ್ತರಿಗೆ ಕಿತ್ತಳೆ ಬಣ್ಣದ ಉಡುಪು ತೊಡಿಸಲಾಗಿದೆ. ಅವರನ್ನೆಲ್ಲ ಸಾಲಾಗಿ ಕೂರಿಸಿರುವ ಉಗ್ರರು ಕಪ್ಪು ಬಟ್ಟೆ ಧರಿಸಿ ಮುಖಕ್ಕೂ ಬಟ್ಟೆ ಕಟ್ಟಿಕೊಂಡು ಗನ್‌ಗಳನ್ನು ಹಿಡಿದಿದ್ದಾರೆ. ಮುಂದೆ ಮಂಡಿಯೂರಿ ಕುಳಿತ ಕಿತ್ತಳೆಸೂಟಿನ ಅಪಹೃತರನ್ನು ಐಸಿಸ್ ಉಗ್ರರು ಅತ್ಯಂತ ಭಯಾನಕವಾಗಿ ಹತ್ಯೆ ಮಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ವೀಡಿಯೋ ಮಾಡಲಾಗಿದ್ದು, ಈ ದೃಶ್ಯಗಳನ್ನು ಭಾನುವಾರ ರಾತ್ರಿ ಆನ್‌ಲೈನ್‌ನಲ್ಲಿ ಕಳುಹಿಸಿಕೊಡಲಾಗಿದೆ.

ಕ್ರೈಸ್ತ ದೇಶಕ್ಕೆ ಇದೊಂದು ಎಚ್ಚರಿಕೆಯ ರಕ್ತಸಿಕ್ತ ಸಂದೇಶ ಎಂಬ ಶಿರೋನಾಮೆಯನ್ನು ಆ ವೀಡಿಯೋಗೆ ನೀಡಲಾಗಿದೆ. ಜೋರ್ಡಾನಿಯನ್ ಪೈಲಟ್ ಒಬ್ಬನನ್ನು ಕಬ್ಬಿಣದ ಪಂಜರದಲ್ಲಿ ಕೂಡಿಹಾಕಿ ಜೀವಂತ ಬೆಂಕಿಹಚ್ಚಿ ಸುಟ್ಟು ಐಸಿಸ್ ಉಗ್ರರ ಹೇಯಕೃತ್ಯದ ಬಳಿಕ 21 ಜನರ ಶಿರಚ್ಛೇದದ ಈ ವೀಡಿಯೋ ಬಿಡುಗಡೆಯಾಗಿದೆ. ಕಳೆದ ಜನವರಿಯಲ್ಲಿ ಅಪಹರಿಸಲಾಗಿದ್ದ ಕ್ರೈಸ್ತರ ಸಾಮೂಹಿಕ ಶಿರಚ್ಛೇದ ವೀಡಿಯೊ ಕಂಡ ಅಂತಾರಾಷ್ಟ್ರೀಯ ಸಮುದಾಯ ಐಸಿಸ್ ಉಗ್ರರ ಈ ಅಟ್ಟಹಾಸ, ಪಾಶನೀಕೃತ್ಯದಿಂದ ಕೆರಳಿ ನಿಂತಿದೆ.

By suddi9

Leave a Reply

Your email address will not be published. Required fields are marked *