ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಇಸಿಸ್ ಉಗ್ರರು ಇದೀಗ ಮತ್ತೆ ತಮ್ಮ ಅಟ್ಟಹಾಸ ಮುಂದುವರೆಸಿದ್ದು ಇರಾಕ್‌ನ ಪಶ್ಚಿಮ ಪ್ರಾಂತ್ಯ ಭದ್ರತಾ ಸಿಬಂದಿಗಳು ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಸಜೀವವಾಗಿ ಸುಟ್ಟು ತಮ್ಮ ಹೇಯ ಕೃತ್ಯ ಪ್ರದರ್ಶಿಸಿದ್ದಾರೆ.
ಅಲ್ ಬಗ್ಧಾದಿ ಪಟ್ಟಣದಲ್ಲಿ ಮಂಗಳವಾರ ಆಲ್‌ಬು ಉಬೇದ್ ಸುನ್ನಿ ಜನಾಂಗದವರನ್ನು ಗುರಿಯಾಗಿಸಿಕೊಂಡ ಉಗ್ರರು ಸುಮಾರು 40 ಮಂದಿಯನ್ನು ಜೀವಂತವಾಗಿ ಸುಟ್ಟು ಕೊಂದಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಸರಕಾರ ಬೆಂಬಲಿತ ಸಹ್ ವಾ ಅರೆ ಸೈನಿಕ ದಳಕ್ಕೆ ಸೇರಿದ ಪೊಲೀಸರು ಹಾಗೂ ಭದ್ರತಾ ಸಿಬಂದಿಗಳು ಸೇರಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ ಅಮೇರಿಕಾದ ಸೇನಾ ನೆಲೆಅಯ ಸಮೀಪವೇ ಇಸಿಸ್ ಉಗ್ರರು ಈ ದುಷ್ಕೃತ್ಯ ನಡೆಸಿದ್ದು ಅಮೆರಿಕವನ್ನು ಬೆದರಿಸುವ ನಿಟ್ಟಿನಲ್ಲಿ ಈ ಹೀನ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ .

