ಲಂಡನ್ : ಎದುರಿಗೆ ಸುಬಗನಂತೆ ವರ್ತಿಸುತ್ತಿರುವ ಅಮೆರಿಕದ ನರಿಬುದ್ಧಿಯನ್ನು ರಷ್ಯಾದ ಸಂಶೋಧಕರು ಬಯಲಿಗೆಳೆದಿದ್ದಾರೆ. ವಿಶ್ವದ ಪ್ರತಿಯೊಂದು ಮನೆಯ ಕಂಪ್ಯೂಟರ್ ನ ಒಳನುಗ್ಗಿ ಅದರೊಳಗಿರುವ ಎಲ್ಲ ಮಾಹಿತಿಗಳನ್ನೂ ಕದಿಯುವ `ರಹಸ್ಯ ಅಸ್ತ್ರ’ವೊಂದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್.ಎಸ್‍.ಎ) ಬಳಸುತ್ತಿದೆ. ಬೇಹುಗಾರಿಕೆ ನಡೆಸುವಂತಹ ವಿಧ್ವಂಸಕ ಸಾಫ್ಟ್’ವೇರ್ ಅನ್ನು ಹಾರ್ಡ್‍’ವೇರ್’ಗಳಲ್ಲಿ ಅಡಗಿಸಿಡುವುದು ಹೇಗೆ ಎಂಬ ಕಲೆಯನ್ನು ಕರಗತ ಮಾಡಿಕೊಂಡಿರುವ ಎನ್‍.ಎಸ್‍.ಎ, ವಿಶ್ವಾದ್ಯಂತ ಕಂಪ್ಯೂಟರ್’ಗಳ ಮಾಹಿತಿಯ ಗೂಢಚಾರಿಕೆ ನಡೆಸುತ್ತಿದೆ.

hacker1

ರಷ್ಯಾದ ಸೈಬರ್ ಸಂಶೋಧಕರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಭಾರತ ಸೇರಿದಂತೆ 30 ರಾಷ್ಟ್ರಗಳ ಕಂಪ್ಯೂಟರ್’ಗಳಲ್ಲಿ ಒಂದಲ್ಲ ಒಂದು ಬೇಹುಗಾರಿಕಾ ಪ್ರೋಗ್ರಾಂ ಅನ್ನು ಎನ್‍.ಎಸ್‍.ಎ ಅಳವಡಿಸಿದೆ. ಇದರಲ್ಲಿ ಅತಿ ಹೆಚ್ಚು ಇನ್ಫೆಕ್ಷನ್‍’ಗಳು ಕಂಡುಬಂದಿರುವುದು ಇರಾನ್‍’ನಲ್ಲಿ. ನಂತರದ ಸ್ಥಾನಗಳನ್ನು ರಷ್ಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಮಾಲಿ, ಸಿರಿಯಾ, ಯೆಮನ್ ಮತ್ತು ಅಲ್ಜೀರಿಯಾ ಪಡೆದಿವೆ. ಎನ್‍.ಎಸ್‍.ಎಯ ಈ ಬೇಹುಗಾರಿಕಾ ಅಭಿಯಾನ ಆರಂಭವಾಗಿದ್ದು 2001ರಲ್ಲಿ. ಆದರೆ 2008ರಲ್ಲಿ ಒಬಾಮ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದು ಇನ್ನಷ್ಟು ಹೆಚ್ಚಾಯಿತು ಎಂದೂ ರಷ್ಯಾ ಹೇಳಿದೆ.

By suddi9

Leave a Reply

Your email address will not be published. Required fields are marked *