ನವದೆಹಲಿ: ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕರಾಗಿದ್ದ ಇರಾಕಿನ ಇಸಿಸ್ ಉಗ್ರರಿಗೆ ಇದೀಗ ಮಾರಕ ರೋಗ ಎಬೋಲಾ ಬಡಿದಿದ್ದು, ಉಗ್ರರು ತಲ್ಲಣಿಸುತ್ತಿದ್ದಾರೆ.
ಇರಾಕ್ ಸಿರಿಯಾ ರಾಷ್ಟ್ರಗಳಲ್ಲಿ ಜನರನ್ನು ಪಶುಗಳಂತೆ ಕೊಲ್ಲುತ್ತಿದ್ದ ಕ್ರೂರಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಡ್ ಸಿರಿಯಾ ಉಗ್ರರಿಗೆ ವಿಶ್ವವನ್ನೇ ನಡುಗಿಸುತ್ತಿರುವ ಮಾರಕ ಎಬೋಲಾ ರೋಗ ಅಂಟಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಮಾಹಿತಿ ಹೊರಹಾಕಿದೆ.
ಇಸಿಸ್ ಆಕ್ರಮಿತ ಇರಾಕಿನ ಮಸೂಲ್ ನಗರದ ಹಲವರಿಗೆ ಎಬೋಲಾ ರೋಗ ಅಂಟಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ. ತೀವ್ರ ವಾಂತಿ, ಕೆಮ್ಮು ಮುಂತಾದ ಸಮಸ್ಯೆಗಳಿಂದ ನರಳುತ್ತಿದ್ದಾರೆ ಎನ್ನಲಾಗಿದೆ.

ebola
ಮಾರಣಾಂತಿಕ ಕಾಯಿಲೆ ಎಬೋಲಾ ಅಂಟಿಕೊಂಡಿರುವುದರಿಂದ ಪ್ರಾಣ ಉಳಿಸಿಕೊಳ್ಳಲು ಹಲವು ಉಗ್ರರು ಮಸೂಲ್ ಕ್ಯಾಂಪ್ ಬಿಟ್ಟು ತೆರಳುತ್ತಿದ್ದಾರಂತೆ ಕಾರಣ ಇರಾಕ್‍ನಲ್ಲಿದ್ದ ಹಲವು ವೈದ್ಯರನ್ನು ಇಸಿಸ್ ಉಗ್ರರೇ ಕೊಂದಿದ್ದು, ವಿಶ್ವಸಂಸ್ಥೆ ಆರೋಗ್ಯ ತಂಡ ಸಹ ಇಲ್ಲಿಗೆ ಬರುತ್ತಿಲ್ಲ. ಇದರಿಂದಾಗಿ ಅವರಿಗೆ ಚಿಕಿತ್ಸೆ ಸಿಗದೇ ನರಳುವಂತಾಗಿದೆ.
ಪಶ್ಟಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಎಬೋಲಾ ರೋಗ ಕಾಣಿಸಿಕೊಂಡಿದ್ದು, ಅಲ್ಲಿದ್ದ ಬಂದು ಇಸಿಸ್ ಸೇರಿರುವವರಿಂದ ಈ ಸೋಂಕು ಹರಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಜಗತ್ತನ್ನೇ ನಡುಗಿಸಿದ ಇಸಿಸ್ ಉಗ್ರರಿಗೆ ಇದೀಗ ಪ್ರಾಣ ಭೀತಿ ಶುರುವಾಗಿದೆ.

By suddi9

Leave a Reply

Your email address will not be published. Required fields are marked *