ನವದೆಹಲಿ: ಅಮೀರ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ ‘ಪಿಕೆ’ ಕುರಿತು ಟ್ವೀಟ್ ಮಾಡಿರುವ ಬಂಗಾಳಿ ಭಾಷೆಯ ಖ್ಯಾತ ಲೇಖಕಿ, ತಸ್ಲೀಮಾ ನಸ್ರೀನ್, ಈ ಚಿತ್ರವನ್ನು ಪಾಕಿಸ್ತಾನ ಅಥವಾ ಬಾಂಗ್ಲಾ ದೇಶದಲ್ಲಿ ನಿರ್ಮಿಸಿದ್ದರೆ ಸಿನಿಮಾ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಅಮೀರ್ ಖಾನ್ ಸೇರಿದಂತೆ ಎಲ್ಲರೂ ಜೈಲಿನಲ್ಲಿರುತ್ತಿದ್ದರು ಎಂದಿದ್ದಾರೆ.

nasreen

ಭಾರತದಲ್ಲಿ ಇದನ್ನು ನಿರ್ಮಾಣ ಮಾಡಿರುವುದರಿಂದ ಜೈಲಿಗೋಗುವ ಆಪಾಯದಿಂದ ಇವರೆಲ್ಲಾ ಪಾರಾಗಿದ್ದರೆಂದು ಹೇಳಿರುವ ತಸ್ಲೀಮಾ ನಸ್ರೀನ್, ಚಿತ್ರವನ್ನು ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಮಾಡುತ್ತಿರುವ ಪ್ರತಿಭಟನೆ ಕುರಿತು, ಈ ರೀತಿ ಆಗುತ್ತಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಗುವಂತಾಗಿದೆ ಎಂದಿದ್ದಾರೆ.

ನೀವು ಯಾವ ಚಿತ್ರ ನೋಡಬಾರದು ಹಾಗೂ ಯಾವ ಪುಸ್ತಕ ಓದಬಾರದು ಎಂಬುದನ್ನು ಅನಕ್ಷರಸ್ಥ ಮುಲ್ಲಾಗಳು, ಬಾಬಾಗಳು ನಿರ್ಧರಿಸುವಂತಾಗಿರುವುದು ವಿಷಾದನೀಯ ಸಂಗತಿ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *