ಬಂಟ್ವಾಳ : ಮುನ್ನೂರು ಗ್ರಾಮದ ಸೋಮನಾಥ ಉಳಿಯ ಶ್ರೀ ಸೋಮೇಶ್ವರೀ ದೇವಸ್ಥಾನ ಮತ್ತು ಶ್ರೀ ಅರಸು ಧೂಮಾವತಿ ಬಂಟ ದೈವಸ್ಥಾನದ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ಕ್ಷೇತ್ರದ ಅವರಣದಲ್ಲಿ ನಡೆಯಿತು.

ಕ್ಷೇತ್ರದ ಗಡಿಪ್ರದಾನರಾದ ಬಸಪ್ಪ ಯಾನೆ ಜೆ.ರವೀಂದ್ರ ನಾಯಕ್ ಅವರು ಮಹಾಸಭೆಯನ್ನು ದೀಪಪ್ರಜ್ವಲನಗೈದು ಉದ್ಘಾಟಿಸಿ ಶುಭ ಹಾರೈಸಿದರು.ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ  ಉಮಾನಾಥ ನಾಯಕ್ ಉಳ್ಳಾಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.


ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ರಾದ ನರಸಿಂಹ ನಾಯಕ್ ಹರೇಕಳ,ಉಳ್ಳಾಲ ಉಳಿಯ ಮಾಗಣೆ ಗುರಿಕಾರರಾದ  ಯು.ದಯಾನಂದ ನಾಯಕ್, ಶ್ರೀ ಸೋಮೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಯಶೋಧ ವಿ.ನಾಯಕ್ ಕುತ್ತಾರ್ ಸುಭಾಸ್ ನಗರ, ಶ್ರೀ ಅರಸು, ಧೂಮಾವತಿ ಬಂಟ ದೈವಸ್ಥಾನದ ಅರ್ಚಕರಾದ ಪ್ರಕಾಶ್ ನಾಯಕ್ ಅತಿಥಿಗಳಾಗಿ ಭಾಗವಹಿಸಿದ್ದರು.


ಜತೆ ಕೋಶಾಧಿಕಾರಿ ಅನುಷ್ ಮಜಲ್ ತೋಟ ಪ್ರಾರ್ಥಿಸಿದರು.ಕೋಶಾಧಿಕಾರಿ ಸುದೇಶ್ ಕುಮಾರ್ ಲೆಕ್ಕಪತ್ರವನ್ನು ಮಂಡಿಸಿದರು.ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಅವರು ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕೊನೆಯಲ್ಲಿ‌ ವಂದಿಸಿದರು.


ನೂತನ ಆಡಳಿತ ಸಮಿತಿಯ ಆಯ್ಕೆ:
ಸಭೆಯಲ್ಲಿ 2026-27 ರಿಂದ 2029 ರವರೆಗಿನ ಮೂರುವರ್ಷದ ಅವಧಿಗೆ ನೂತನ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಉಳ್ಳಾಲ, ಯು ದಯಾನಂದ ನಾಯಕ್ ಗೌರವಾಧ್ಯಕ್ಷರು, ವೆಂಕಟೇಶ್ ಬಂಟ್ವಾಳ ಪ್ರಧಾನ ಕಾರ್ಯದರ್ಶಿ, ಮಿಥಿಲೇಶ್ ಎಂ.ನಾಯಕ್, ಪ್ರವೀಣ್ ನಾಯಕ್ ಬಿ.ಉಪಾಧ್ಯಕ್ಷರು,ಯೋಗೀಶ್ ನಾಯಕ್ ಪಂಪ್ ವೆಲ್ , ಆಶಾ ನಾಯಕ್ ಗೋರಿಗುಡ್ಡ ಕಾರ್ಯದರ್ಶಿಗಳು,

ಸುದೇಶ್ ಕುಮಾರ್ ಕೋಶಾಧಿಕಾರಿ,ಅನುಷ್ ಮಜಲ್ ತೋಟ ಜತೆ ಕೋಶಾಧಿಕಾರಿಯಾಗಿ ಪುನರಾಯ್ಕೆಯಾದರು ಉಳಿದಂತೆ 16 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.

By Suddi9

Leave a Reply

Your email address will not be published. Required fields are marked *