ಬಂಟ್ವಾಳ: ಕ್ಯಾಂಪ್ಕೋ ಸದಸ್ಯರಾದ ಶಿವಪ್ಪ ಅವರ ಹೃದಯ ಚಿಕಿತ್ಸೆಗಾಗಿ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ 50 ಸಾವಿರ ಸಹಾಯ ಧನವನ್ನು ಕ್ಯಾಂಪ್ಕೋ ಮಂಚಿ ಶಾಖೆಯಲ್ಲಿ ಹಸ್ತಾಂತರಿಸಲಾಯಿತು.

ಕ್ಯಾಂಪ್ಕೋದ ಸಾಂತ್ವನ ಯೋಜನೆಯಡಿ ಶಿವಪ್ಪ ಅವರಿಗೆ ಮಂಜೂರಾದ ಈ ಸಹಾಯಧನದ ಮೊತ್ತವನ್ನು ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್ .ಸತೀಶ್ಚಂದ್ರ ಅವರು ಫಲಾನುಭವಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ ,ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪಿ ಹಾಗೂ ಕ್ಯಾಂಪ್ಕೋ ಮಂಚಿ ಶಾಖೆಯ ಸಿಬ್ಬಂದಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
