ಬಂಟ್ವಾಳ: ಬೋಳಂತೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ  ಕಲ್ಲಡ್ಕ ವಲಯ  ಮಟ್ಟದ 14ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ  ಪಂದ್ಯಾಟ  ಮಂಗಳವಾರ  ನಡೆಯಿತು.                    

ಅಂತರಾಷ್ಟ್ರೀಯ ಮಟ್ಟದ ಆಟಗಾರ ನಿವೃತ ದೈಹಿಕ ಶಿಕ್ಷಣ ಶಿಕ್ಷಕ  ಶಂಕರ ವಿ ಕಲ್ಲಡ್ಕ ಪಂದ್ಯಾಟವನ್ನು ಉದ್ಘಾಟಿಸಿ ಶುಭಹಾರೈಸಿದರು.ಎಸ್.ಡಿ.ಎಂ.ಸಿ.ಅಧ್ಯಕ್ಷ ಬಶೀರ್ ನಾರಂಕೋಡಿ  ಅಧ್ಯಕ್ಷತೆವಹಿಸಿದರು.  
 
ಪ್ರಭಾರ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ,  ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ  ಆಶಾ ನಾಯಕ್ , ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಇಬ್ರಾಹಿಂ ಕರೀಂ, ಬಿ.ಕೆ ಬಾಯ್ಸ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಮುಸ್ತಾಪ ಬಂಗಾರ್ಕೋಡಿ , ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಶ್ರಫ್, ಅನ್ಸಾರ್, ಸ್ವಚ್ಛತಾ ಪ್ರೇಮಿ ಹಮೀದ್, 
ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ  ಇಂದುಶೇಖರ್, ಕಲ್ಲಡ್ಕ ಕ್ಲಸ್ಟರ್ ನ  ಸಿ .ಆರ್.ಪಿ.  ಜ್ಯೋತಿ,ಕಲ್ಲಡ್ಕ ವಲಯದ ಪಂದ್ಯಾಟಗಳ ನೋಡಲ್  ಜಗದೀಶ್ ಬಾಳ್ತಿಲ,ಶಾಲಾ ಮುಖ್ಯ ಶಿಕ್ಷಕಿ ಸುಜಾತ ಎಂ, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಸ್ಥಿತರಿದ್ದರು.  ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಸ್ವಾಗತಿಸಿ, ಶಿಕ್ಷಕಿ ರೂಪಶ್ರೀ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *