ಬಂಟ್ವಾಳ: ಇಲ್ಲಿನ ರಾಮಲ್ ಕಟ್ಟೆ ಎಳೆಯರ ಬಳಗ (ರಿ.)  ಹಾಗೂ ಎಳೆಯರ ಬಳಗ ಮಹಿಳಾ ಮಂಡಳಿಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ ಅವರ ಅಧ್ಯಕ್ಷತೆಯಲ್ಲಿ  ನಡೆಯಿತು. 

ಸಭೆಯಲ್ಲಿ 2025–26ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ ಅವರು  ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು. . ವಸಂತ ಅಮೀನ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅನಿಲ್ ರಾಮಲ್ ಕಟ್ಟೆ ಕೋಶಾಧಿಕಾರಿಯಾಗಿ ಆಯ್ಕೆಯಾದರು.

 

ಗೌರವಾಧ್ಯಕ್ಷರಾಗಿ ಸಂತೋಷ್ ರಾಮಲ್ ಕಟ್ಟೆ, ಉಪಾಧ್ಯಕ್ಷರಾಗಿ ನವೀನ್ ರಾಮಲ್ ಕಟ್ಟೆ, ಜಗನ್ನಾಥ್ ಸಾಲಿಯಾನ್, ಗೌರವ ಸಲಹೆಗಾರರಾಗಿ ಪದ್ಮನಾಭ ಬೆಳ್ಚಡ, ಕ್ರೀಡಾಧ್ಯಕ್ಷರಾಗಿ ರತೀಶ್ ರಾಮಲ್ ಕಟ್ಟೆ, ಕ್ರೀಡಾ ಕಾರ್ಯದರ್ಶಿಗಳಾಗಿ ಗಣೇಶ್, ವಿನೀತ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಧೂಮ ವಳವೂರ್ ಆಯ್ಕೆಯಾದರು. ಸಲಹೆಗಾರರಾಗಿ ನೋಣಯ್ಯ ಕುಲಾಲ್ ದೇಮುಂಡೆ, ಅಶೋಕ್ ಕಲ್ಲಗುಡ್ಡೆ, ರಾಘವ ದೂಟ, ಮೋಹನ್ ದಾಸ್ ಮಣೂರು ಹಾಗೂ ಸತೀಶ್ ರಾಮಲ್ ಕಟ್ಟೆ ಆಯ್ಕೆಯಾದರು.

ಭಜನಾ ಸಮಿತಿಯ ಸಂಚಾಲಕರಾಗಿ ಶೇಖರ್ ಭಂಡಾರಿ, ಸಹ ಸಂಚಾಲಕರಾಗಿ ಪ್ರಸಾದ್ ರಾಮಲ್ ಕಟ್ಟೆ, ಕಾರ್ಯದರ್ಶಿಯಾಗಿ ಸುಷ್ಮಾ ರವಿಚಂದ್ರ, ಸಹ ಕಾರ್ಯದರ್ಶಿಗಳಾಗಿ ಸಂಧ್ಯಾ ಸುಶೀಲ್, ಮಮತಾ ಪ್ರಸಾದ್ ಆಯ್ಕೆಯಾದರು.

ಮಹಿಳಾ ಮಂಡಳಿಯ ಅಧ್ಯಕ್ಷರಾಗಿ ವಸಂತಿ ವಸಂತ ಅರಬನ, ಕಾರ್ಯದರ್ಶಿಯಾಗಿ ಸೌಮ್ಯ, ಕೋಶಾಧಿಕಾರಿಗಳಾಗಿ ವಿನೋದ ಜಯರಾಮ್ ಹಾಗೂ ಪ್ರಮೀಳ, ಜೊತೆ ಕಾರ್ಯದರ್ಶಿಯಾಗಿ ರಾಜೀವಿ ಶೆಟ್ಟಿ, ಉಪಾಧ್ಯಕ್ಷೆಯಾಗಿ ಪ್ರೇಮ ಶೇಖರ್, ಗೌರವಾಧ್ಯಕ್ಷೆಯಾಗಿ ಅನಿಲಾಕ್ಷಿ ರವಿ ಹಾಗೂ ಕ್ರೀಡಾಧ್ಯಕ್ಷೆಯಾಗಿ ವಸಂತಿ ಮೇಘ ಸುದರ್ಶನ್ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಗಳಾಗಿ ವಿಜಯ ವೆಂಕಟೇಶ್ ಹಾಗೂ ನೇತ್ರಾ ಜಗನ್ನಾಥ ಆಯ್ಕೆಯಾದರು.
ಅನಿಲ್ ರಾಮಲ್ ಕಟ್ಟೆ ಸ್ವಾಗತಿಸಿದರು. ನವೀನ್ ರಾಮಲ್ ಕಟ್ಟೆ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.ಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳ  ಕುರಿತು ಚರ್ಚಿಸಲಾಯಿತು.

By Suddi9

Leave a Reply

Your email address will not be published. Required fields are marked *