ಬಂಟ್ವಾಳ:ತಾಲೂಕಿನ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ 355ನೇ ಆರಾಧನಾ ಮಹೋತ್ಸವ  ನಡೆಯಿತು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಉಪಸ್ಥಿತಿಯಲ್ಲಿ ಗುರುಗಳಿಗೆ ಪಂಚಾಮೃತ ಅಭಿಷೇಕ, ಗುರುಪೂಜೆ, ಪಾದಪೂಜೆ ಮತ್ತು ವಿಶೇಷ ಪೂಜೆ ನೆರವೇರಿತು. 
 
ಇದೇ ವೇಳೆ ಮಹಾಗಣಪತಿ ಮತ್ತು ಗಾಯತ್ರೀ ದೇವಿಗೆ ವಿಶೇಷ ಪೂಜೆ ಸಹಿತ ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
 
ಉದ್ಯಮಿಗಳಾದ ಜಯಪ್ರಕಾಶ್ ತುಂಬೆ, ನವೀನ್ ಮಾಣಿಮಜಲು, ಭಯಂಕೇಶ್ವರ ದೇವಳದ ಟ್ರಸ್ಟಿ ಭುವನೇಶ್ ಮೊಗರ್ನಾಡು, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಂ.ಬೂಬ ಸಪಲ್ಯ ಮುಂಡಬೈಲು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೆ.ಬಾಬು ಸಪಲ್ಯ ಕಾಡಬೆಟ್ಟು, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಬಂಟ್ವಾಳ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಮಾಜಿ ಅಧ್ಯಕ್ಷ ವಿಶ್ವನಾಥ್ ಎಸ್.ಎ.ಬಿ.ಸಿ.ರೋಡು, ನಿವೃತ್ತ ಪಿಡಿಒ ವೇದವ ಗಾಣಿಗ, ಪ್ರಮುಖರಾದ ಶ್ರೀಪತಿ ಉಡುಪ ಬೆಂಗಳೂರು,ರವಿಚಂದ್ರ ಮಯ್ಯ, ಬಾಲಕೃಷ್ಣ ಸೆರ್ಕಳ, ಜಯರಾಮ ಕುಲಾಲ್ ಉರುಡಾಯಿ, ಜಯ ಪೂಜಾರಿ ಪಿಲಿಂಗಾಲು, ಭಜನಾ ಸಮಿತಿ ಅಧ್ಯಕ್ಷ ಕೀರ್ತನ್ ಪೂಜಾರಿ, ಮಾಜಿ ಅಧ್ಯಕ್ಷ ಬಿ.ಜಯ ಪೂಜಾರಿ ಮತ್ತಿತರರಿದ್ದರು.

By Suddi9

Leave a Reply

Your email address will not be published. Required fields are marked *