ಕೈಕಂಬ:ಮಳಲಿ ೪೮ ನೇ ವರ್ಷದ ಮೊಸರುಕುಡಿಕೆ ಉತ್ಸವವನ್ನು ಹಿರಿಯರಾದ ರಾಮಚಂದ್ರ ನಾವಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಅಟೋಟ ಸ್ಪರ್ಧೆಗಳನ್ನು ಹಗ್ಗಜಗ್ಗಾಟ, ವಾಲಿಬಾಲ್,ಮಡಕೆಒಡೆಯುವ ಸ್ಪರ್ಧೆಗಳು ನಡೆಯಿತು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಶೋರು ಕುಲಾಲ್ ಬಾಕಿಮಾರ್ ವಹಿಸಿದ್ದರು.

ಗಂಜಿಮಠ ಗ್ರಾಮ. ಪಂಚಾಯತ್ ಅಧ್ಯಕಷೆ ಮಾಲತಿ, ಶಾಸಕ ಡಾ,ವೈ ಭರತ್ ಶೆಟ್ಟಿ ಚಂದ್ರಹಾಸ ಶೆಟ್ಟಿ ನಾರಳ, ಶೋಹನ್ ಅತಿಕಾರಿ, ಶ್ರವಣ್, ಪಂ. ಸದಸ್ಯರಾದ ತಮ್ಮಯ, ಪ್ರವೀಣ್‌ ಶೆಟ್ಟಿ ,ನೀಲಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕಿ ಪ್ರಭಾವತಿ ಸುರೇಶ್ ಇವರನ್ನು ಸನ್ಮಾನಿಸಲಾಯಿತು.ರಾಜೇಶ್ ಪೂಜಾರಿಯವರನ್ನು ಗೌರವಿಸಲಾಯಿತು.ತುಳು ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯ ಬೂಬ ಪೂಜಾರಿ ಮೊಸರು ಕುಡಿಕೆ ಉತ್ಸವಕ್ಕೆ ಆಗಮಿಸಿ ಶುಭಕೋರಿದರು. ಪುರಂದರ ಕುಲಾಲ್ ಸ್ವಾಗತಿಸಿ ನಿರೂಪಿಸಿದರು.ಹೇಮಂತ್ ಕುಲಾಲ್ ವಂದಿಸಿದರು.

By Suddi9

Leave a Reply

Your email address will not be published. Required fields are marked *