ಅಡ್ಡೂರು-ಪೊಳಲಿ ಸ್ಥಳೀಯ ನಾಗರಿಕರ ಆಗ್ರಹ
ಹಳೆ ಸೇತುವೆಯ ಗರ್ಡರ್‌ಗಳು ಬದಲಿಸಿ
ಕೈಕಂಬ: ಸುರತ್ಕಲ್-ಬಜ್ಪೆ-ಬಿ. ಸಿ. ರೋಡ್-ಕಬಕ ರಾಜ್ಯ ಹೆದ್ದಾರಿಯ ಅಡ್ಡೂರಿನ ಬಳಿ ಇರುವ ಪೊಳಲಿ ಸೇತುವೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಎಲ್ಲ ಘನ ವಾಹನ ಸಂಚಾರ ನಿಷೇಧಿಸಲಾಗಿದ್ದು, ಸದ್ಯ ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಇತರ ಪ್ರಯಾಣಿಕರು ನಾನಾ ರೀತಿಯ ತೊದರೆ ಅನುಭವಿಸುವಂತಾಗಿದೆ.

ಸುಮಾರು ೫೦-೬೦ ವರ್ಷ ಹಳೆಯದಾದ ಈ ಪೊಳಲಿ ಸೇತುವೆ ಶಿಥಿಲಗೊಂಡಿದೆ. ಜಿಲ್ಲಾ ಮಟ್ಟದ ತಜ್ಞರ ಸಮಿತಿ ನೀಡಿರುವ ವರದಿಯಂತೆ ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಿಸವ ಅನಿವಾರ್ಯತೆ ಕಂಡು ಬಂದಿದೆ. ಈ ಬಗ್ಗೆ ಸೋಮವಾರ(ಆ. ೧೯) ಅಡ್ಡೂರಿಗೆ ಭೇಟಿ ನೀಡಿ ಸೇತುವೆ ಪರಿಶೀಲನೆ ನಡೆಸಲಿರುವ ರಾಜ್ಯ ಮಟ್ಟದ ಉನ್ನತ ತಜ್ಞರ ಸಮಿತಿ ಅಂತಿಮವಾಗಿ, ಹೊಸ ಸೇತುವೆ ಅಥವಾ ದುರಸ್ತಿ ಬಗ್ಗೆ ವರದಿ ನೀಡಲಿದೆ.

ಗರ್ಡರ್‌ಗಳು ಶಿಥಿಲ :
ಪೊಳಲಿ ಸೇತುವೆ ಹತ್ತಿರ ಗಮನಿಸಿದಾಗ ಎಲ್ಲ ಪಿಲ್ಲರ್‌ಗಳು ಇನ್ನೂ ನೂರು ವರ್ಷ ಬಾಳಿಕೆ ಬರುವಂತೆ ಕಂಡು ಬರುತ್ತಿವೆ. ಆದರೆ ಪಿಲ್ಲರ್‌ಗಳ ಮೇಲಿರುವ ಗರ್ಡರ್‌ಗಳು ಸಂಪೂರ್ಣ ಶಿಥಿಲಗೊಂಡಿವೆ. ಹಾಗಾಗಿ ತುಕ್ಕು ಹಿಡಿದಿರುವ ಗರ್ಡರ್‌ಗಳ ಬದಲಾವಣೆ ನಡೆಯಬೇಕೇ ಹೊರತು ಹೊಸ ಸೇತುವೆ ಅನಿವಾರ್ಯವಲ್ಲ. ಸೇತುವೆಯ ಪಿಲ್ಲರ್‌ಗಳು ಸಾಕಷ್ಟು ಶಕ್ತಿಶಾಲಿಯಾಗಿವೆ. `ರೋಗಿಯ ಕಾಲಿನ ಬೆರಳಿಗೆ ಊತವಾಗಿದ್ದರೆ ಬೆರಳಿಗೆ ಚಿಕಿತ್ಸೆ ನಡೆಸಬೇಕೇ ಹೊರತು ಕಾಲು ಕಡಿದು ಹಾಕುವುದಲ್ಲ’ ಅಡ್ಡೂರು ಮತ್ತು ಪೊಳಲಿ ನಾಗರಿಕರ ದೂರಾಗಿದೆ.
ಘನ ವಾಹನಗಳಲ್ಲಿ
ಸರಕು ಸಾಗಾಟ :
ಸೇತುವೆ ಶಿಥಿಲಗೊಳ್ಳಲು ಅವ್ಯಾಹತ ಮರಳುಗಾರಿಕೆ ಕಾರಣ ಎಂದು ಆರೋಪಿಸಿತ್ತಿರುವ ಮಂದಿ, ಸೇತುವೆಯ ಮೇಲಿಂದ ಕಳೆದ ೨ ವರ್ಷಗಳಿಂದ ಕೆಎನ್‌ಆರ್ ಸಂಸ್ಥೆಯ ೧೦ ಚಕ್ರಗಳ ಲಾರಿಗಳಲ್ಲಿ ನಿರಂತರ ೪೦-೫೦ ಟನ್ ಸಾಮರ್ಥ್ಯದ ಸರಕು ಸಾಗಾಟ ಮಾಡುತ್ತಿದ್ದ ಲಾರಿಗಳಲ್ಲಿಬಗ್ಗೆ ಯಾರೂ ಧ್ವನಿ ಎತ್ತಿಲ್ಲ. ಈ ಬಗ್ಗೆ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ವಹಿಸಲಾಗಿದೆ. ಜೊತೆಗೆ ಸೇತುವೆ ಪಿಲ್ಲರ್‌ಗಳ ಪಕ್ಕದಲ್ಲೇ ತುಂಬೆಯಿAದ ಎಂಆರ್‌ಪಿಎಲ್‌ಗೆ ನೀರು ಸರಬರಾಜು ಮಾಡುವ ಭಾರೀ ಗಾತ್ರದ ಪೈಪ್ ಅಳವಡಿಸಲಾಗಿದೆ. ಇದರಿಂದ ಸೇತುವೆಗೆ ಹಾನಿ ಉಂಟಾಗಿದೆ ಎಂದು ಅಡ್ಡೂರು ಮತ್ತು ಪೊಳಲಿ ಭಾಗದ ನಾಗರಿಕರು ತಿಳಿಸಿದರು.
ಪ್ರಯಾಣಿಕರ ಪಾದಯಾತ್ರೆ :
ಸದ್ಯ ಪೊಳಲಿ ಸೇತುವೆಯ ಎರಡೂ ಕಡೆ ೨.೭೫ ಮೀಟರ್ ಎತ್ತರದ ಕಮಾನ್ ಅಳವಡಿಸಲಾಗಿದೆ. ಘನ ವಾಹನಗಳ ಹೊರತುಪಡಿಸಿ ಲಘು ವಾಹನಗಳು ಸೇತುವೆ ಮೇಲೆ ಸಂಚರಿಸಲು ಅವಕಾಶವಿದೆ. ಪೊಳಲಿ ದ್ವಾರದ ಮೂಲಕ ಅಡ್ಡೂರಿಗೆ ಬರುವ ಬಸ್‌ಗಳು ಅಲ್ಲಿ ಪ್ರಯಾಣಿಕರ ಖಾಲಿ ಮಾಡಿ ಮರಳುತ್ತವೆ. ಅಲ್ಲಿಂದ ಮುಂದಕ್ಕೆ ಪ್ರಯಾಣಿಕರು ಸೇತುವೆ ಮೇಲಿಂದ ನಡೆದುಕೊಂಡು ಪೊಳಲಿಯತ್ತ ಸಾಗಬೇಕು. ಅಲ್ಲಿ ಮತ್ತೊಂದು ಬಸ್‌ನಲ್ಲಿ ಬಿ. ಸಿ. ರೋಡ್ ಕಡೆಗೆ ಹೋಗುತ್ತದೆ. ಪೊಳಲಿ ದ್ವಾರದತ್ತ ಬಸ್‌ಗಳಲ್ಲಿ ಪ್ರಯಾಣಿಸುವವರೂ ಇದೇ ಕಷ್ಟ ಅನುಭವಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಎರಡೆರಡು ಟಿಕೆಟ್ ಪಡೆಯಬೇಕಾಗುತ್ತದೆ. ಈ ವ್ಯವಸ್ಥೆ ಎಷ್ಟು ಸಮಯ ಮುಂದುವರಿಯಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಜಿಲ್ಲಾಡಳಿತ ಈಗ ತೆಗೆದುಕೊಂಡಿರುವ ನಿರ್ಧಾರ ಗಮನಿಸಿದಾಗ ಈ ವ್ಯವಸ್ಥೆ ಸುಮಾರು ಐದಾರು ವರ್ಷ ಮುಂದುವರಿಯುವ ಲಕ್ಷಣ ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.