ಉಳಾಯಿಬೆಟ್ಟು ಪಂಚಾಯತ್‌ನಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟನೆ
ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪೂರಕ : ಕ್ಯಾ. ಬ್ರಿಜೇಶ್ ಚೌಟ
ಕೈಕಂಬ: ದಿವಂಗತ ತಿಮ್ಮಪ್ಪ ಪಕ್ಕಳ ಪೆರ್ಮಂಕಿಗುತ್ತು ಇವರ ಸ್ಮರಣಾರ್ಥ ಎಕ್ಕಾರು ಬೆಳ್ಳಿಮಾರುಗುತ್ತು ವಸಂತಿ ಟಿ. ಪಕ್ಕಳ, ಮೊಮ್ಮಗ ರಾಹುಲ್ ಪಕ್ಕಳ ಪೆರ್ಮಂಕಿಗುತ್ತು ಮತ್ತು ಮಕ್ಕಳು ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ನಿರ್ಮಿಸಿರುವ ಗ್ರಂಥಾಲಯದ ನೂತನ ಸುಸಜ್ಜಿತ ಕಟ್ಟಡ ಆ. ೧೬ರಂದು ಲೋಕಾರ್ಪಣೆಗೊಂಡಿತು.
ಗ್ರAಥಾಲಯ ಉದ್ಘಾಟನೆ ಬಳಿಕ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ವಸಂತಿ ಟಿ. ಪಕ್ಕಳ ಅವರು ಕೊಡುಗೆಯಾಗಿ ನಿರ್ಮಿಸಿ ಕೊಟ್ಟಿರುವ ಈ ಗ್ರಂಥಾಲಯ ಇತರರಿಗೆ ಮಾದರಿ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ದೆಸೆಯಲ್ಲಿ ಇದೊಂದು ಉತ್ತಮ ಕೆಲಸ. ಮಕ್ಕಳು ಮೊಬೈಲ್‌ನಿಂದ ಆದಷ್ಟು ಮಟ್ಟಿಗೆ ದೂರವಾಗಿ, ಆಸಕ್ತಿ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಿ ಮುಂದೆ ಬರಬೇಕು ಎಂದರು.
ಮAಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಲಭ್ಯವಾಗಬೇಕು. ಆ ಮೂಲಕ ಮಕ್ಕಳು ಬ್ಯಾಕಿಂಗ್, ಕೆಪಿಎಸ್‌ಸಿ, ಯುಪಿಎಸ್‌ಸಿನಂತಹ ಉನ್ನತ ಮಟ್ಟದಲ್ಲಿ ಪರೀಕ್ಷೆ ಬರೆಯುವಂತಾಗಬೇಕು ಹಾರೈಸಿದರು.
ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯಕ್ಕೆ ಜಾಗ ಹಾಗೂ ಹಣಕಾಸಿನ ನೆರವು ನೀಡಿರುವ ವಸಂತಿ ಟಿ. ಪಕ್ಕಳ ಹಾಗೂ ಪುತ್ರ ಸುಧೀರ್ ಕುಮಾರ್ ಪಕ್ಕಳ ಅವರನ್ನು ಪಂಚಾಯತ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅನಿತಾ ವಿ. ಕ್ಯಾಥರಿನ್ ಸ್ವಾಗತಿಸಿದರು. ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಮಂಗಳೂರು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಜಿಲ್ಲಾ ಗ್ರಂಥಾಲಯದ ಅಧಿಕಾರಿ ಗಾಯತ್ರಿ, ಪಂಚಾಯತ್ ಸದಸ್ಯರು ಹಾಗೂ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ರಾಜೀವ ಶೆಟ್ಟಿ ಸಲ್ಲಾಜೆ, ಫ್ರಾನ್ಸಿಸ್ ಕುಟಿನ್ಹೊ, ಮಾಜಿ ಸದಸ್ಯ ಕಮಲಾಕ್ಷ ತಲ್ಲಿಮಾರು, ಉದ್ಯಮಿ ರವಿರಾಜ ರಾವ್, ಸ್ಥಳೀಯ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ವರ್ಗ ಸಹಕರಿಸಿದರೆ, ಶಿಕ್ಷಕ ಚೇತನ್ ಕೊಪ್ಪ ಅವರು ನಿರೂಪಿಸಿ ವಂದಿಸಿದರು.