ಆ.23 ರಂದು ಗುರುಪುರ ಕೈಕಂಬದಲ್ಲಿ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ
ಕೈಕಂಬ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ ಆ. 23ರಂದು ಶುಕ್ರವಾರ ಗುರುಪುರ ಕೈಕಂಬದ ಪ್ರೀಮಿರ್ ಹಾಲ್ನಲ್ಲಿ ಮಧ್ಯಾಹ್ನ 2:30 ಕ್ಕೆ ನಡೆಯಲಿದೆ.

ಮುಖ್ಯ ಅತಿಥಿಯಾಗಿ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆ ,ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಮಂಗಳೂರು, ಕೋಶಾಧಿಕಾರಿ ಮುಸಬ್ಬ ತುಂಬೆ, ಜಿಲ್ಲಾ ಸಮಿತಿ ಸದಸ್ಯರಾದ ನಝೀರ್ ಕುಂಜತಲ್ಕ ಹಾಗೂ SDPI ಮಂಗಳೂರು ಉತ್ತರ ಕ್ಷೇತ್ರ ಸಮಿತಿಯ ಅಧ್ಯಕ್ಷ ಉಸ್ಮಾನ್ ಗುರುಪುರ ರವರು ಆಗಮಿಸಲಿದ್ದಾರೆ ಎಂದು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.