ಮೈಸೂರು ಚಲೋ ಪಾದಯಾತ್ರೆ ಬಂಟ್ವಾಳದಲ್ಲಿ ಬಿಜೆಪಿ ಪ್ರಮುಖರ ಪೂರ್ವ ಭಾವಿ ಸಭೆ
ಬಂಟ್ವಾಳ: ಮೂಡಾ ಹಗರಣವನ್ನು ಸಿಬಿಐಗೆ ಒಪ್ಪಿಸುವಂತೆ ಮತ್ತು ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ವತಿಯಿಂದ ಆ.3 ರಿಂದ ನಡೆಯುವ ಮೈಸೂರು ಚಲೋ ಪಾದಯಾತ್ರೆಯ ಬಿಜೆಪಿಯ ಬಂಟ್ವಾಳ ಮಂಡಲದ ಪ್ರಮುಖರ ಪೂರ್ವಭಾವಿ ಸಿದ್ಧತಾ ಸಭೆಯು ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.
ಬಂಟ್ವಾಳ ಕ್ಷೇತ್ರದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ,ಜಿಲ್ಲೆಯ ಉಪಾಧ್ಯಕ್ಷರಾದ ಪೂಜಾ ಪೈ,ಪಾದಯಾತ್ರೆಯ ಜಿಲ್ಲಾ ಸಂಚಾಲಕರಾದ ವಿಕಾಸ್ ಪುತ್ತೂರು,ಜಿಲ್ಲಾ ಸಂಘಟನಾ ಪರ್ವದ ಸಂಚಾಲಕರಾದ ದೇವದಾಸ್ ಶೆಟ್ಟಿ ಅವರು ಭಾಗವಹಿಸಿ ಮಾತನಾಡಿದರು.
ಜಿಲ್ಲೆಯ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ,ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ,ಶಿವಪ್ರಸಾದ್ ಕರೋಪಾಡಿ ವೇದಿಕೆಯಲ್ಲಿದ್ದರು.
,ಪಾದಯಾತ್ರೆಯ ಬಂಟ್ವಾಳ ಸಂಚಾಲಕರಾದ ಪುಷ್ಪರಾಜ್ ಚೌಟ,ಸಹ ಸಂಚಾಲಕರಾದ ರಶ್ಮಿತ್ ಶೆಟ್ಟಿ, ಮಂಡಲದ ಪದಾಧಿಕಾರಿಗಳು,ವಿವಿಧ ಮೋರ್ಚಾ ಅಧ್ಯಕ್ಷರುಗಳು,ಪ್ರಧಾನ ಕಾರ್ಯದರ್ಶಿಗಳು,ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.