“ಪ್ರಾಚ್ಯ ಪಚ್ಚೆವನಸಿರಿ ವೈದ್ಯರತ್ನ” ಪ್ರಶಸ್ತಿ ಪ್ರದಾನ
ಬಂಟ್ವಾಳ:ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡಬಿದಿರೆ ಮತ್ತು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಇದರ ಸಹಾಯಯೋಗದಲ್ಲಿ ಶ್ರೀ ರಾಮ ರಾಣಿ ಜೈನ ಸಂಶೋಧನ ಸಂಸ್ಥಾನದಲ್ಲಿ ಜರಗಿದ “ಒಪ್ಪಿಕೋಪಚ್ಚೆವನಸಿರಿ ಜಾಗೃತಿ ಅಭಿಯಾನ”

ಜೈನಮಹಿಳೆಸಿರಿದೇವಿ(ವಮಸಿರಿ)ಹೆಸರಿನಲ್ಲಿ ಕೊಡಲಾಗುವ “ಪ್ರಾಚ್ಯ ಪಚ್ಚೆವನಸಿರಿ ವೈದ್ಯರತ್ನ” ಪ್ರಶಸ್ತಿಯನ್ನು ಅನಂತಾಡಿ ಗೋಳಿಕಟ್ಟೆ ಗಂಗಾಧರ ಕರಿಯ ಪಂಡಿತರಿಗೆ ಪ್ರದಾನ ಮಾಡಲಾಯಿತು.
ಮೂಡಬಿದ್ರೆ ಜೈನಮಠದ ಡಾ.ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿವಿವೇಕ್ ಆಳ್ವಾ ಸಹಿತ ಹಲವಾರು ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.