ಪಲ್ಗುಣಿಯಲ್ಲಿ ಏಕಾಏಕಿ ಹೆಚ್ಚಳವಾದ ನೀರು ಅಮ್ಮುಂಜೆಯಲ್ಲಿ 8 ಮನೆ ಜಲಾವೃತ ಅಗ್ನಶಾಮಕದಳದಿಂದ ರಕ್ಷಣಾ ಕಾರ್ಯ
ಪೊಳಲಿ:ಗುರುವಾರ ಬೆಳಿಗ್ಗೆ ಪಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹೊಳೆಬದಿಯ ಕಡಪು ಕರಿಯ ಎಂಬಲ್ಲಿ ಅಪಾಯದ ಸ್ಥಿತಿಯಲ್ಲಿದ್ದ 8 ಮನೆಗಳನ್ನು ಬಂಟ್ವಾಳ ಅಗ್ನಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಿರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಡಿ. ಅರ್ಚನಾ ಭಟ್ ಹಾಗೂ ಸ್ಥಳೀಯ ಗ್ರಾ.ಪಂ.ಪಿಡಿಒಗಳಾದ ನಯನ, ಮಾಲಿನಿ ಅವರು ಸ್ಥಳಕ್ಕೆ ದೌಡಾಯಿಸಿ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ರಕ್ಷಣೆ ಕಾರ್ಯ ನಡೆಸಿ ಪೊಳಲಿಯ ಸರ್ವಮಂಗಳ ಸಭಾಭವನದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ.
ಬುಧವಾರ ರಾತ್ರಿ ವಿಪರೀತವಾಗಿ ಗಾಳಿ,ಮಳೆಯಾಗಿದ್ದು ನೇತ್ರಾವತಿ ಸಹಿತ ಪಲ್ಗುಣಿ ನದಿಯಲ್ಲು ಏಕಾಏಕಿ ನೀರು ಏರಿಕೆಯಾಗಿ ಆತಂಕವನ್ನುಂಟುಮಾಡಿತ್ತು.

ಪೊಳಲಿ ಸಮೀಪದ ಅಮ್ಮುಂಜೆಯ ಹೊಳೆಬದಿಯ ಕಡಪು ಕರಿಯದಲ್ಲಿದ್ 8 ಮನೆಗಳಿಗೆ ನೀರು ನುಗ್ಗಿದ್ದು ಈ ಪೈಕಿ ಮೂರು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿತ್ತು.ಸುದ್ದಿ ತಿಳಿದ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ 8 ಮನೆ ಸದಸ್ಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ನದಿಯಲ್ಲಿ ಕಸದ ರಾಶಿಯೇ ತೇಲಿಬಂದಿತ್ತು.ವಿದ್ಯುತ್ ತಂತಿಗಳು ಕೂಡ ಇಲ್ಲಿ ಇದ್ದ ಕಾರಣ ವಿದ್ಯುತ್ ಕಡಿತಗೊಳಿಸಿದ ಬಳಿಕ ರಕ್ಷಣಾ ಕಾರ್ಯ ನಡೆಸಲಾಯಿತು..

ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ತಹಶೀಲ್ದಾರ್ ಅರ್ಚನಾ ಭಟ್ ಅವರು ಸ್ಥಳದಲ್ಲಿದ್ದು ಸೂಕ್ತ ಮಾರ್ಗದರ್ಶನ ನೀಡಿದರು. ಅಮುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಧಕೃಷ್ಣ ತಂತ್ರಿ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧ ಲೋಕೇಶ್, ಚಂದ್ರಹಾಶ ಪಲ್ಲಿಪಾಡಿ, ಸದಸ್ಯರಾದ ಕಾರ್ತಿಕ್ ಬಲ್ಲಾಳ್, ಲೋಕೇಶ್ ಭರಣಿ, ಭಾಗೀರಥಿ, ರವೀಂದ್ರ ಸುವರ್ಣ, ಲಕ್ಮೀಶ್ ಶೆಟ್ಟಿ, ಚಂದ್ರಾವತಿ , ಕಂದಾಯ ನಿರೀಕ್ಷಕ ವಿಜಯ್ ಪ್ರಮುಖರಾದ ವೆಂಕಟೇಶ ನಾವಡ, ಯಶವಂತ ಪೊಳಲಿ ಸಹಿತ ಅಮುಂಜೆ ಹಾಗೂ ಕರಿಯಂಗಳ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಶಾಲಾ ಶಿಕ್ಷಕರು , ಸ್ಥಳೀಯರ ನೇಕರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.
ಸಮೀಪದ ಪೊಳಲಿ ಒಂದನೇ ಅಡ್ಡರಸ್ತೆಯಲ್ಲಿರುವ ಮಸೀದಿ ಜಲಾವೃತಗೊಂಡರೆ ಇಲ್ಲಿನ ತಗ್ಗು ಪ್ರದೇಶದಲ್ಲಿರುವ ತೋಟ ಗದ್ದೆಯಲ್ಲು ನೀರು ನಿಲುಗಡೆಯಾಗಿತ್ತು ಎಂದು ತಿಳಿದು ಬಂದಿದೆ.