ಗುರುಪುರ ಬಂಡಸಾಲೆಯಲ್ಲಿ ಬೃಹತ್
ಮರ ತೆರವು-ಹೆದ್ದಾರಿ ಸಂಚಾರ ಸ್ಥಗಿತ
ಕೈಕಂಬ : ನಿರಂತರ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಗುರುಪುರ ಅಲ್ಲಲ್ಲಿ ಮರಗಳು ರಸ್ತೆಗಳಿಗೆ ಉರುಳಿ ಬಿದ್ದಿದ್ದು, ದಿನಪೂರ್ತಿ ವಿದ್ಯುತ್ ಕೈಕೊಟ್ಟಿದೆ. ಮರಗಳ ತೆರವುಗೊಳಿಸಿ ವಿದ್ಯುತ್ ಪುನರಾರಂಭಕ್ಕೆ ಮೆಸ್ಕಾಂ ಸಿಬ್ಬಂದಿ ಸಮರೋಪದಿಯಲ್ಲಿ ಕೆಲಸ ನಡೆಸಿದ್ದಾರೆ.

ಗುರುಪುರ ಬಂಡಸಾಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಪಾಯಕಾರಿಯಾಗಿದ್ದ ಬೃಹತ್ ಮರ ಕಡಿದು ಹಾಕಲಾಯಿತು. ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ೧೬೯ರ ಗುರುಪುರದಲ್ಲಿ ಎರಡು ತಾಸು ವಾಹನ ಸಂಚಾರ ನಿಯಮಿತಗೊಳಿಸಲಾಯಿತು. ಸ್ಥಳೀಯ ಪಂಚಾಯತ್ ಸದಸ್ಯರು, ಸಂಘ-ಸಂಸ್ಥೆಗಳ ಯುವಕರು ಕಾರ್ಯಾಚರಣೆಗೆ ಸಹಕರಿಸಿದರು. ಇದೇ ವೇಳೆ ಪಿಡಿಒ ಪಂಕಜಾ ಶೆಟ್ಟಿ, ಉಪ-ತಹಶೀಲ್ದಾರ್ ಶಿಪ್ರಸಾದ್, ವಿಎ(ಗ್ರಾಮ ಕರಣಿಕೆ) ಶಿಲ್ಪಾ ಮತ್ತಿತರರ ಉಪಸ್ಥಿತಿಯಲ್ಲಿ ಸ್ಥಳೀಯ ಯುವಕರು ಕಸ-ಪ್ಲಾಸ್ಟಿಕ್ ಬಾಟಲಿಗಳಿಂದ ತುಂಬಿ ಹೋಗಿದ್ದ ಬಂಡಸಾಲೆಯ ಎನ್‌ಎಚ್ ಮೋರಿ ಸ್ವಚ್ಛಗೊಳಿಸಿದರು. ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಪ್ರವಾಹಪೀಡಿತ ಗುರುಪುರ ಹಾಗೂ ಇತರೆಡೆ ತುರ್ತು ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.