ಗುರುಪುರ : ಹೈದರಾಬಾದ್‌ನ ವಿದ್ಯಾಭಾರತಿ ವಿದ್ಯಾ ಕೇಂದ್ರದಲ್ಲಿ ಸೆ. ೪ರಂದು ನಡೆದ ದಕ್ಷಿಣ ವಲಯ ವಿದ್ಯಾಭಾರತಿ ಮಟ್ಟದ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ವಾಮಂಜೂರು ಮೂಡುಶೆಡ್ಡೆಯ ಶಾರದಾ ಶುಭೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಯಜತ್ ಎನ್. ಕೋಟ್ಯಾನ್ ಅವರು ಚಿನ್ನ ಹಾಗೂ ಬೆಳ್ಳಿ ಪದಕ ವಿಜೇತನಾಗಿದ್ದಾರೆ.

ಕ್ರೀಡಾಕೂಟದ ೨೦೦ ಓಟದ ವಿಭಾಗದಲ್ಲಿ ಚಿನ್ನ ಹಾಗೂ ೧೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿರುವ ಈತ, ಮುಂದಿನ ತಿಂಗಳು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ರಾಷ್ಟç ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈತ ಗುರುಪುರ ಬಡಕರೆಯ ನಿತಿನ್ ಕೋಟ್ಯಾನ್ ಮತ್ತು ತಾರಾವತಿ ದಂಪತಿಯ ಪುತ್ರನಾಗಿದ್ದಾನೆ.

By Suddi9

Leave a Reply

Your email address will not be published. Required fields are marked *