ಬಂಟ್ವಾಳ : ಶ್ರೀ ವಿಜಯಲಕ್ಷ್ಮಿ ಯುವಕ ಸಂಘ( ರಿ) ನರಿಕೊಂಬು ಇದರ ವತಿಯಿಂದ ಪುಣ್ಯಕ್ಷೇತ್ರ ಸಂದರ್ಶನ ಕಾರ್ಯಕ್ರಮ ನಿಮಿತ್ತ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಫೂಳಲಿ, ಅನ್ನಪೂರ್ಣೇಶ್ವರಿ ಕ್ಷೇತ್ರ ಸುಂಕದಕಟ್ಟೆ, ದುರ್ಗಾ ಪರಮೇಶ್ವರಿ ದೇವಸ್ಥಾನ ಕಟೀಲು ಯಾತ್ರೆಯನ್ನು ಸಂಘದ ಅಧ್ಯಕ್ಷರಾದ ಪ್ರಸಾದ್ ಗಾಣಿಗ ಇವರ ನೇತೃತ್ವದಲ್ಲಿ ನಡೆಸಲಾಯಿತು.

ಸದಸ್ಯರಾದ ರಾಜೇಶ್ ನಿರ್ಮಲ್, ಕೃಷ್ಣಪ್ಪ ಅಂತರ, ಉಮೇಶ್ ಟೈಲರ್, ಪ್ರೇಮನಾಥ ಶೆಟ್ಟಿ, ಜಗದೀಶ್ ಬೋರುಗುಡ್ಡೆ, ಹರೀಶ್ ಟೈಲರ್, ಸವಿತಾ ಉಷಾ, ವೀಣಾ ಹಾಗೂ 50 ಮಂದಿ ಭಕ್ತರು ಸೇರಿ ಭಜನೆ ಯೊಂದಿಗೆ ಯಾತ್ರೆ ಸಂಪನ್ನ ಗೊಳಿಸಿದರು.
