ಗುರುಪುರ : ತೆಂಕಎಡಪದವು ಗ್ರಾಮ ಪಂಚಾಯತ್‌ನಲ್ಲಿ ಕಳೆದ ೬ ವರ್ಷದಿಂದ ಅಭಿವೃದ್ಧಿ ಅಧಿಕಾರಿಯಾಗಿ(ಪಿಡಿಒ) ಸೇವೆ ಸಲ್ಲಿಸುವುದರೊಂದಿಗೆ ಒಟ್ಟು ೨೮ ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಆ. ೩೧ರಂದು ಸೇವಾ ನಿವೃತ್ತಿ ಹೊಂದಿರುವ ರಾಜೀವಿ ನಾಯ್ಕ್ ಅವರಿಗೆ ಸೋಮವಾರ(ಆ. ೩೧) ತೆಂಕಎಡಪದವು ಪಂಚಾಯತ್ ಸಭಾಭವನದಲ್ಲಿ ಭವ್ಯ ವಿದಾಯಕೂಟ ಏರ್ಪಡಿಸಲಾಯಿತು.

ಪಿಡಿಒ ರಾಜೀವಿ ನಾಯ್ಕ್ ಮಾತನಾಡಿ, ಹಿಂದೆ ಒಂದು ಅವಧಿಗೆ ಇಲ್ಲಿ ಕಾರ್ಯದರ್ಶಿಯಾಗಿದ್ದೆ. ಪಿಡಿಒ ಆಗಿ ಸೇವಾ ಭಡ್ತಿ ಪಡೆದುಕೊಂಡ ಬಳಿಕ ಮತ್ತೊಮ್ಮೆ ತೆಂಕಎಡಪದವಿಗೆ ಬಂದಿದ್ದೇನೆ. ಕಳೆದ ೬ ವರ್ಷಗಳಲ್ಲಿ ಕಚೇರಿಯಲ್ಲಿದ್ದು ಗ್ರಾಮಸ್ಥರ ಕುಂದುಕೊರತೆಗಳಿಗೆ ಸೂಕ್ತ ಸ್ಪಂದನೆ ನೀಡಿದ್ದೇನೆ ಎಂಬ ಭಾವನೆ ನನ್ನಲ್ಲಿದೆ. ಗ್ರಾಮಸ್ಥರು, ಸಿಬ್ಬಂದಿ ವರ್ಗ ನನಗೆ ನೀಡಿರುವ ಸಹಕಾರ ಮರೆಯುವಂತಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದರು.

ನಿಕಟಪೂರ್ವ ಅಧ್ಯಕ್ಷೆ ಅನಸೂಯಾ ಸಹಿತ ಹಲವರು ಪಿಡಿಒ ಅವರ ಗುಣಗಾನ ಮಾಡಿದರು. ಪತ್ರಕರ್ತ ಧನಂಜಯ ಗುರುಪುರ ಮಾತನಾಡಿದರು. ಪಂಚಾಯತ್ ಆಡಳಿತಾಧಿಕಾರಿ ಸುಕನ್ಯಾ ಅವರು ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷೆ ಅನಸೂಯಾ, ಕಾರ್ಯದರ್ಶಿ ಲಕ್ಷö್ಮಣ ಸಪಲಿಗ ಹಾಗೂ ನಿಕಟಪೂರ್ವ ಉಪಾಧ್ಯಕ್ಷ ಗಂಗಾಧರ ಪೂಜಾರಿ(ಗೋಪಾಲ), ತಾಪಂ ಮಾಜಿ ಸದಸ್ಯ ನೋಬರ್ಟ್ ಮಥಾಯಿಸ್, ಪಂಚಾಯತಿನ ನಿಕಟಪೂರ್ವ ಸದಸ್ಯರು, ಸಿಬ್ಬಂದಿ ವರ್ಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪಂಪ್ ಅಪರೇಟರ್‌ಗಳು, ಗ್ರಾಮಸ್ಥರು ಇದ್ದರು. ಸ್ವಾಗತಿಸಿದ ಪಂಚಾಯತ್ ಲೆಕ್ಕ ಸಹಾಯಕ ಇಸ್ಮಾಯಿಲ್ ಎಂ. ಎಸ್., ಅವರು ನಿರೂಪಿಸಿ ವಂದಿಸಿದರು.

