ಬಂಟ್ವಾಳ: ಶ್ರೀ ಭೀಮಶೈಲ ಬಾಲಗೋಕುಲ ಕೆಸರುಗದ್ದೆ ಸಮಿತಿ ಪುವನೊಟ್ಟು ಕಾರಿಂಜ ಇದರ ಆಶ್ರಯದಲ್ಲಿ ಕುತ್ರಿಮಾರು ದಿವಂಗತ ನಾರಾಯಣಶೆಟ್ಟಿ ಇವರ ಗದ್ದೆಯಲ್ಲಿ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮವು ನಡೆಯಿತು.
ಶ್ರೀ ಕ್ಷೇತ್ರ ಕಾರಿಂಜದ ಪ್ರಧಾನ ಅರ್ಚಕರಾದ ಮಿಥುನ್ ರಾಜ್ ನಾವಡ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ,ಕಾರಿಂಜೇಶ್ವರ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಲಿಮಜಲು,ಕಾವಳಮೂಡೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ ಸಂಘದ ಅಧ್ಯಕ್ಷರಾದ ರಾಜೇಶ್ ಸಾಲಿಯನ್ ತಾರಿಮಜಲು,ಸ್ಥಾಪಕಾಧ್ಯಕ್ಷರಾದ ರಾಘವೇಂದ್ರ ನಾಯ್ಕ ಪುವನೊಟ್ಟು ,ಮಾಜಿ ಅಧ್ಯಕ್ಷರಾದ ಗೋಪಾಲ ಶೆಟ್ಟಿ ,ಗ್ರಾಮದ ಹಿರಿಯರಾದ ಬೆಟ್ಟು ತಿಮ್ಮಪ್ಪ ಶೆಟ್ಟಿ ಪೆರಿಯೇಳು ಉಪಸ್ಥಿತರಿದ್ದರು.

ಬಳಿಕ ಸ್ಥಳೀಯ ಯುವಕರು,ಮಹಿಳೆಯರು, ಮಕ್ಕಳಿಗೆ ವಿವಿಧ ಆಟೋಟಗಳನ್ನು ನಡೆಸಲಾಯಿತು ಸಂಜೆ ನಡೆದ ಸಮರೋಪ ಸಮಾರಂಭದಲ್ಲಿಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾತ್ವಿಕ್ ಜಿ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಬಿಜೆಪೊ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಸುದರ್ಶನ್ ಬಜ, ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವೀರೇಂದ್ರ ಅಮೀನ್, ಮಾಗಣೆ ತಂತ್ರಿಗಳಾದ ಸದಾಶಿವ ಮುಚ್ಚಿನ್ನಾಯ ಕಲ್ಲಾಪು,ಬಾಲಗೋಕುಲ ಪ್ರಮುಖರಾದ ಹರೀಶ್ ಜಾರಬೆಟ್ಟು, ರಾಜೇಶ್ ಭಂಡಾರಿ ಪುಲಿಮಜಲು, ಮೋಹನ್ ನಾಯ್ಕಪುವನೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಬಾಲಗೋಕುಲದ ಮಾತಾಜಿಗಳಾದ ಶ್ರದ್ಧಾ, ಸುಶ್ಮಿತಾ ,ಲಿಖಿತಾ, ನಿಶಾ, ಅಶ್ವಿತಾ , ಜಾರಪ್ಪ ನಾಯ್ಕ, ಹರ್ಷಿತ್ ದೇವಾಡಿಗ, ಕಿಶೋರ್ ಗುರಿಮಜಲು ರವರು ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು
ಪವಿತ್ರ ಶೆಟ್ಟಿ ಮೋಹಿನಿ ಸಹಕರಿಸಿದರು. ಜಯಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
