ಕೈಕಂಬ: ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) 2025-26 ನೇ ಸಾಲಿನ
ವಾರ್ಷಿಕ ಮಹಾಸಭೆಯು ಪೊಳಲಿ ರಾಮಕೃಷ್ಣ ತಪೋವನದ ಸಭಾಭವನದಲ್ಲಿ ಆ.29 ರಂದು ಶನಿವಾರ ನಡೆಯಿತು.

ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್‌ ನಾವಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಬಂಟ್ವಾಳ ತಾಲೂಕು ಕೃಷಿ ಸಲಹಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಿಎ ಅಬುಬಕ್ಕರ್‌ ಅವರನ್ನು ಸನ್ಮಾನಿಸಲಾಯಿತು. ಎಸ್‌ ಎಸ್‌ ಎಲ್‌ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಗೌರವ ನಿಧಿಯೊಂದಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಉಪಾಧ್ಯಕ್ಷ ಗೋಪಾಲ ಅಂಚನ್‌ ಬಡಕಬೈಲ್ ,ನಿರ್ಧೇಶಕರಾದ ಡಿ.ಎ.ಅಬುಬಕ್ಕರ್‌ ಅಮುಂಜೆ,ಕರುಣಾಕರ ಆಳ್ವ,ಯಶವಂತ ಪೂಜಾರಿ,ಸುಕೇಶ್‌ ಚೌಟ,‌ ಲಕ್ಷ್ಮೀಶ್‌ ಶೆಟ್ಟಿ , ನಿರಂಜನಿ ಸಿ.ಶೆಟ್ಟಿ, ಜಯಂತಿ , ಗೋಡ್ಪ್ರಿ ಪೆರ್ನಾಂಡಿಸ್‌, ಕರಿಯದ ಹಾಗೂ ವಲಯ ಮೇಲ್ವಿಚಾರಕರಾದ ಕೀರ್ತಿರಾಜ್‌ ಹಾಗೂ ಸಂಘದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರವಹಣಾಧಿಕಾರಿ ವಿಜಯ ರವಿ ಪೆರ್ನಾಂಡಿಸ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಗೋಪಾಲ ಅಂಚನ್‌ ವಂದಿಸಿದರು.

By Suddi9

Leave a Reply

Your email address will not be published. Required fields are marked *