Published On: Sun, Jul 28th, 2024

ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ-ಮಹಿಳಾ ಮಂಡಳಿ ಜಂಟಿಯಾಗಿ

ಕೆಸರ‍್ದೊಂಜಿದಿನ'-ಆಟಿಡೊಂಜಿ ದಿನ’ ಆಯೋಜನೆ

ಕೈಕಂಬ: ವಾಮಂಜೂರು ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ ಮತ್ತು ಜೈಶಂಕರ್ ಮಾತೃ ಮಂಡಳಿ ಜಂಟಿಯಾಗಿ ಜು. ೨೮ರಂದು ತಿರುವೈಲಿನ ದೇವಸದ ಗದ್ದೆಯಲ್ಲಿ ಸಂಭ್ರಮ-ಸಡಗರದಿ0ದ ಕೆಸರ‍್ದೊಂಜಿದಿನ' ಮತ್ತುಆಟಿಡೊಂಜಿ ದಿನ’ ಕಾರ್ಯಕ್ರಮ ಆಯೋಜಿಸಿತು.

ಸ್ಥಳೀಯ ಹಿರಿಯ ವ್ಯಕ್ತಿಗಳಾದ ಲಿಂಗಪ್ಪ ಸಾಲ್ಯಾನ್, ಜಯಂತಿ ದೇವಸ, ಜಾನಕಿ ಬೊಂಡAತಿಲ, ದೇವಕಿ ತಿರುವೈಲು ಹಾಗೂ ಜೈಶಂಕರ್ ಮಾತೃ ಮಂಡಳಿಯ ಅಧ್ಯಕ್ಷೆ ಪುಷ್ಪಾ ಆರ್., ಅವರು ಕಳಸೆಯಲ್ಲಿದ್ದ ತೆಂಗಿನ ಹಿಂಗಾರ ಅರಳಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೃಷಿಕ ಅಶೋಕ್ ರೈ ಅವರು ಯುವ ಪೀಳಿಗೆಗೆ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಉದ್ಘಾಟನೆ ವೇಳೆ ಜಾನಕಿ ಮತ್ತು ದೇವಕಿ ಅವರ ತುಳು ಜನಪದ `ಪಾಡ್ದಾನ’ ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ದಿವಾಕರ ಆಚಾರ್ಯ ಕುಡುಪು, ಜೈಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಬಾಲಕೃಷ್ಣ, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಊರಿನ ಗಣ್ಯರು, ನೂರಾರು ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು. ಮನೋಜ್ ವಾಮಂಜೂರು ನಿರೂಪಿಸಿದರು.

ಕೆಸರ‍್ದೊಂಜಿ ದಿನ :

ತಿರುವೈಲು ದೇವಸದ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕೆಸರ‍್ದೊಂಜಿದಿನ ದಿನದ ಕಾರ್ಯಕ್ರಮದಲ್ಲಿ ಎಳೆಯರು ಮತ್ತು ಹಿರಿಯರಿಗೆ ಪ್ರತ್ಯೇಕ ಆಟೋಟ ಏರ್ಪಡಿಸಲಾಗಿತ್ತು. ಮಕ್ಕಳಿಗೆ ವಿವಿಧ ವಯೋಮಾನ ವಿಭಾಗಗಳಲ್ಲಿ ಓಟ, ಗದ್ದೆಯಲ್ಲಿ ನಿಧಿ ಶೋಧ, ಹಗ್ಗ-ಜಗ್ಗಾಟ ಮತ್ತಿತರ ಕೌಶಲ್ಯಭರಿತ ಕ್ರೀಡೆ ಆಯೋಜಿಸಲಾಗಿತ್ತು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಕ್ರೀಡಾಕೂಟದಲ್ಲಿ ಆಬಾಲವೃದ್ಧರು ಪಾಲ್ಗೊಂಡಿದ್ದರು. ಉದ್ಯಮಿ ರಘು ಸಾಲ್ಯಾನ್ ಮತ್ತು ಮೋಹನದಾಸ್ ಕುಕ್ಯಾನ್ ಕೆಸರ‍್ದೊಂಜಿದಿನ ದಿನದ ನೇರ ವೀಕ್ಷಕ ವಿವರಣೆ ನೀಡಿದರು. ಬೆಳಿಗ್ಗೆ ಬೆಲ್ಲ-ನೀರು, ಪಾನೀಯ ಹಾಗೂ ಮಧ್ಯಾಹ್ನ ಸಾರ್ವಜನಿಕರಿಗೆ ಆಟಿ ತಿಂಗಳ ಮಹತ್ವ ಸಾರುವ ವಿಶೇಷ ಪಲ್ಯ, ಸಾಂಬಾರು ಒಳಗೊಂಡ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.

ರುಚಿಕ್ಕಟ್ಟಾದ ಪಲ್ಯ-ಆಹಾರ :

ಆಟಿ ಊಟೋಪಚಾರದಲ್ಲಿ ೨೦ಕ್ಕೂ ಹೆಚ್ಚು ಬಗೆಯ ಪಲ್ಯ, ಖದ್ಯ ಪದಾರ್ಥಗಳಿದ್ದವು. ಸೋಜಿ(ಸಪೂರ ಸಜ್ಜಿಗೆ), ತಿಮರೆ(ಒಂದೆಲಗ), ಚಟ್ನಿ, ತೇಟ್ಲ-ಪದೆಂಗಿ(ಕೆಸು-ಹೆಸರು), ಜೀಗುಜ್ಜೆ-ಪದೆಂಗಿ(ಜೀಹಲಸು), ತೊಜಂಕ್ ಪಲ್ಯ, ಕುಡುತ್ತ(ಹುರುಳಿ) ಚಟ್ನಿ, ಪೆಲಕಾಯಿ(ಹಲಸಿನಕಾಯಿ) ಗಾರಿಗೆ, ಪೆಲಕಾಯಿ ಗಟ್ಟಿ, ಕಡ್ಲೆ ಬಲ್ಯಾರ್, ಕೋರಿದ(ಕೋಳಿ) ಪಚ್ಚೆ ಕಜಿಪು, ಪತ್ರೋಡೆ(ಕೆಸುವಿನ ತಿಂಡಿ), ಮರುವಾಯಿ ಸುಕ್ಕ(ಮಳಿ ಪಲ್ಯ), ಶೀರ, ನುಂಗೆಲ್ ಚಟ್ನಿ, ಕುಕ್ಕದ(ಮಾವಿನ) ಚಟ್ನಿ, ಇರೆತ ಗಟ್ಟಿ, ಮಣ್ಣಿ, ಕಜೆ-ಬಿಳೆ ಅಕ್ಕಿ ನುಪ್ಪು…. ಹೀಗೆ ಸಬವಿದಷ್ಟು ಖಾದ್ಯಗಳು ಆಟಿದೊಂಜಿ ದಿನಕ್ಕೆ ಸಾಕ್ಷಿಯಾಗಿದ್ದವು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter