ಅಡ್ಡೂರು ಇದರ ೩೮ನೇ ವರ್ಷದ ಪ್ರಥಮ ಮಹಾಸಭೆ,ಸಮಿತಿ ರಚನೆ ಅದ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ
ಪೊಳಲಿ: ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಅಡ್ಡೂರು ಇದರ ೩೮ನೇ ವರ್ಷದ ಪ್ರಥಮ ಮಹಾಸಭೆಯನ್ನು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಧನಂಜಯ್ ಭಟ್ ಗಂದಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ೩೮ನೇ ವರ್ಷದ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಅದ್ಯಕ್ಷರಾಗಿ ಚಿದಾನಂದ ಗುರಿಕಾರ ನಂದ್ಯ ಅಯ್ಕೆ ಮಾಡಲಾಯಿತು.

ಸಮಿತಿಯಲ್ಲಿ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು ಈ ವರ್ಷದ ಸದಸ್ಯತ್ವ ರೂ. ೧೦೦೦ಗಳನ್ನು ಕೊಟ್ಟು ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದು ನಿರ್ಣಯಿಸಲಾಯಿತು. ಸದಸ್ಯತ್ವ ಪಡೆಯುವವರು ಸಮಿತಿಯವರಿಗೆ ತಿಳಿಸತಕ್ಕದ್ದು ಹಾಗೂ ಒಂದು ಸಾವಿರ ರೂಪಾಯಿಗಳನ್ನು ನೀಡಿದ ಸದಸ್ಯರ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದಾಗಿ ತೀರ್ಮಾನಿಸಲಾಯಿತು