ಫಲ್ಗುಣಿಯಲ್ಲಿ ಗಣೇಶ್‌ಗಾಗಿ ಹುಡುಕಾಟ :
ಸೇತುವೆ ಮೇಲೆ ಕುತೂಹಲಿಗರ ದಂಡು…!
ಕೈಕOಬ: ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿರುವ ಸರಿಪಳ್ಳ ಕನ್ನಗುಡ್ಡೆ ನೂಜಿ ನಿವಾಸಿ, ಹವ್ಯಾಸಿ ಪೋಟೋಗ್ರಾಫರ್ ಗಣೇಶ್ ನೂಜಿಗಾಗಿ ಬುಧವಾರ ಬೆಳಿಗ್ಗಿನಿಂದ ನದಿಯಲ್ಲಿ ಹುಡುಕಾಟ ಆರಂಭವಾಗಿದೆ.
ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ, ಮುಳುಗುಗಾರರು ದೋಣಿಯಲ್ಲಿ ಗಣೇಶ್ ಹುಡುಕಾಟ ನಡೆಸುತ್ತಿದ್ದಾರೆ. ಈ ವೇಳೆ ಸೇತುವೆ ಮೇಲೆ ನೂರಾರು ಕುತೂಹಲಿಗರು ಜಮಾಯಿಸಿದ್ದು, ಆಗಾಗ್ಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
click here……👇👇👇
https://www.instagram.com/reel/C9zpsF2PCmG/?utm_source=ig_web_copy_link
ಕೆಲವು ದಿನಗಳಿಂದ ಗಣೇಶ್ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗಿದ್ದು, ಪತ್ನಿ ಅಶ್ವಿತಾ ಅವರು ಪತಿ ನಾಪತ್ತೆ ಬಗ್ಗೆ ಜು. ೨೨ರಂದು ಬೆಳಿಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಣೇಶ್ ಇಲ್ಲಿವರೆಗೆ ಬಂದಿದ್ದ ಓಲ ಇಲೆಕ್ಟಿçಕ್ ಸ್ಕೂಟರ್‌ನ್ನು ನಿನ್ನೆಯೇ ಠಾಣೆಗೆ ಕೊಂಡೊಯ್ಯಲಾಗಿತ್ತು. ಈತನಿಗೆ ಪುತ್ರಿಯೊಬ್ಬಳಿದ್ದಾಳೆ.