ಗುರುಪುರ ಕೈಕಂಬ ಲಯನ್ಸ್ ಕ್ಲಬ್‌ನ
ನೂತನ ಪದಾಧಿಕಾರಿಗಳ ಪದಗ್ರಹಣ
ಕೈಕಂಬ: ಲಯನ್ಸ್ ಕ್ಲಬ್ ಗುರುಪುರ ಕೈಕಂಬದ ೨೦೨೪ -೨೫ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕೈಕಂಬದ ಸಿಂಧೂರ್ ಅಪಾರ್ಟ್ಮೆಂಟಿನಲ್ಲಿ ನೆರವೇರಿತು.

ಪದಗ್ರಹಣ ಅಧಿಕಾರಿಯಿಂದ ಪಿ.ವಿ. ಅನಿಲ್ ಕುಮಾರ್ ನೂತನ ಅಧ್ಯಕ್ಷ ಮಹೇಶ್ ಶೆಟ್ಟಿ, ಕಾರ್ಯದರ್ಶಿ ಐವನ್ ಡಿ’ಸೋಜ, ಕೋಶಾಧಿಕಾರಿ ಆರನ್ ಫೆರ್ನಾಂಡಿಸ್ ,ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋದಿಸಿದರು.
ನಿರ್ಗಮನ ಅಧ್ಯಕ್ಷ ಸುನಿಲ್ ಡಿ” ಸೋಜ ಕಾರ್ಯದರ್ಶಿ ಪ್ರದೀಪ್ ಸಲ್ದಾನ, ಕೋಶಾಧಿಕಾರಿ ಜೇಸನ್ ಪೇರಿಸ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷ ಮಹೇಶ್ ಶೆಟ್ಟಿ, ಬಬಿತಾಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ವಲಯಾಧ್ಯಕ್ಷ ರೋಶನ್ ಡಿ”ಸೋಜ, ಸ್ಮಿತಾ ಅನಿಲ್ ಕುಮಾರ್, ಒಸ್ವಾಲ್ಡ್ ಡಿ”ಸೋಜ ಮುಖ್ಯ ಅತಿಥಿಗಳಾಗಿದ್ದರು.
ಸಾದಕರಾದ ನಾಗರಾಜ್‌ಭಟ್, ಮಾನಸ ಸದಾನಂದ,ಸಮ್ಯತ ಆಚಾರ್ಯ ಇವರನ್ನು ಸಮ್ಮಾನಿಸಲಾಯಿತು. ೨ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನಸಹಾಯ ನೀಡಲಾಯಿತು. ವಾಲ್ಟರ್ ಫೆರ್ನಂಡಿಸ್, ಒಸ್ವಾಲ್ದ್ ಪೆರಿಸ್, ಆನಂದ್ ಕೆ. ಜೇಮ್ಸ್ ಮೆಂಡ, ಮೆಲ್ವಿನ್ ಸಲ್ದಾನ, ಮ್ಯಾಕ್ಸಿಂ ಸಲ್ದಾನ , ಪದ್ಮನಾಭ ಪೂಜಾರಿ,ಲೂಯಿಸ್ ಡಿ” ಸೋಜ, ಕಾರ್ಮೆಲ ತಾವ್ರೊ ಉಪಸ್ಥಿತರಿದ್ದರು.
ಸುನೀಲ್ ಡಿಸೋಜ ಸ್ವಾಗತಿಸಿ ,ಜೆಪ್ರಯುಆನ್ ತಾವ್ರೊ ವಂದಿಸಿದರು. ಪ್ರದೀಪ್ ಸಾಲ್ದಾನ ನಿರೂಪಿಸಿದರು.