ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ
ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ರಾಮಕೃಷ್ಣ ಹೋಮ, ವಿದ್ಯಾರ್ಥಿ ಹೋಮ, ಭಜನೆ ನಡೆಯಿತು.

ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಅಶ್ರಮದ ಮಕ್ಕಳಿಗೆ ವಿದ್ಯಾರ್ಥಿ ಹೋಮದ ಮಹತ್ವವನ್ನು ತಿಳಿಸಿದರು.

ಶಶಿಮಹಾರಾಜ್ ಹೋಮ ನಡೆಸಿಕೊಟ್ಟರು. ರಾಮಕೃಷ್ಣ ಪರಮಹಂಸರ ಭಕ್ತಾದಿಗಳು ಹಾಗೂ ಆಶ್ರಮವಾಸಿಗಳು ಗುರುಪೂರ್ಣಿಮೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಸ್ವಾಮಿಜಿಗಳ ಆಶೀರ್ವಾದ ಪಡೆದರು.
