ಕೆತ್ತಿಕಲ್ ಪ್ರದೇಶಕ್ಕೆ ಮಹಾನಗರ ಪಾಲಿಕೆ ಆಯುಕ್ತ ಆನಂದ್ ಭೇಟಿ
ಕೈಕಂಬ : ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ಮಂಗಳೂರು-ಸೋಲಾಪುರ ರಾಷ್ಟಿçÃಯ ಹೆದ್ದಾರಿ ೧೬೯ರ ಕೆತ್ತಿಕಲ್ ಪ್ರದೇಶಕ್ಕೆ ಜು. ೨೦ರಂದು ಭೇಟಿ ನೀಡಿದ ಮಂಗಳೂರು ಮಹಾನಗರ ಪಾಲಿಕೆ(ಮನಪಾ) ಆಯುಕ್ತ ಆನಂದ್ ಅವರು ಸಾರ್ವಜನಿಕರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆತ್ತಿಕಲ್ ಗುಡ್ಡಪ್ರದೇಶದಲ್ಲಿ ನೀರಿನ ಒರತೆ ಹೆಚ್ಚಾಗಿ ಕುಸಿತ ಉಂಟಾಗುತ್ತಿದೆ. ಕಾಮಗಾರಿ ಪ್ರದೇಶದಲ್ಲಿ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಇಲ್ಲಿ ಹೆದ್ದಾರಿಗೆ ದಾರಿದೀಪ ಅಳವಡಿಸಬೇಕು ಹಾಗೂ ಇತರ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳ ಪರಿಶೀಲಿಸಿದ ಆಯುಕ್ತರಲ್ಲಿ ತಿರುವೈಲು ವಾರ್ಡ್ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಮನವಿ ಮಾಡಿದರು.

ಕೆತ್ತಿಕಲ್ ಭಾಗದ ಹೆದ್ದಾರಿ ವಿಸ್ತರಣೆ ಪ್ರದೇಶದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ದಾರಿದೀಪ ಅಳವಡಿಸಲು ಪಾಲಿಕೆಯ ಸಂಬAಧಪಟ್ಟ ಇಲಾಖೆಗೆ ಸೂಚಿಸಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದ ಪಾಲಿಕೆ ಆಯುಕ್ತರು, ಹೆದ್ದಾರಿಯಲ್ಲಿ ಅಗತ್ಯ ಎಚ್ಚರಿಕಾ ಪ್ರತಿಫಲನಾ ಫಲಕಗಳು ಹಾಗೂ ಕುಸಿತ ಭಾಗದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಸಂಸ್ಥೆ ಡಿಬಿಎಲ್‌ಗೆ ಸೂಚಿಸಿದ್ದೇನೆ ಎಂದರು.
ಕೆತ್ತಿಕಲ್ ಪ್ರದೇಶದಲ್ಲಿ ಸಂಸ್ಥೆಯು ಸರ್ವಸನ್ನದ್ಧ ರೀತಿಯಲ್ಲಿರುವ ಸಾಕಷ್ಟು ಯಂತ್ರೋಪಕರಣ ನಿಯೋಜಿಸಿದೆ. ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಮಣ್ಣು ಕುಸಿತ ಪ್ರದೇಶದಲ್ಲಿ ಅಗತ್ಯ ಕ್ರಮ, ಎಚ್ಚರಿಕಾ ಪ್ರತಿಫಲನಾ ಫಲಕ(ರಿಫ್ಲೆಕ್ಟರ್) ಅಳವಡಿಸಲಾಗುವುದು ಎಂದು ಡಿಬಿಎಲ್ ಸಂಸ್ಥೆಯ ಹಿರಿಯ ಪ್ರಬಂಧಕ(ಮ್ಯಾನೇಜರ್) ನಾಗಬಾಬು ರೆಡ್ಡಿ ಮಾಧ್ಯಮಕ್ಕೆ ತಿಳಿಸಿದರು.
ಮನಪಾ ಆಯುಕ್ತರ ಜೊತೆಯಲ್ಲಿ ಪಾಲಿಕೆಯ ಇಂಜಿನಿಯರ್‌ಗಳು, ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಡಿಬಿಎಲ್ ಸಂಸ್ಥೆಯ ಹಿರಿಯ ಪ್ರಬಂಧಕ ನಾಗಬಾಬು ರೆಡ್ಡಿ, ವೆಟ್‌ವೆಲ್ ಯೋಜನೆಯ ಗುತ್ತಿಗೆದಾರ ಸಂತೋಷ್, ಕಿರಿಯ ಇಂಜಿನಿಯರ್‌ಗಳು ಮತ್ತಿತರರು ಇದ್ದರು