ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ)ಬಂಟ್ವಾಳ ಇದರ
ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸಜೀಪಮೂಡ ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಅವರು ಶಿಬಿರದ ಉದ್ಘಾಟನೆ ನೆರವೇರಿಸಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರ ಜೊತೆಗೆ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಗ್ರಾಮ,ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮಗಳು, ಮಾಶಾಸನ, ಸಹಾಯಧನ, ವಾಸ್ತಲ್ಯ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ, ಜನಮಂಗಳ,ಕೃಷಿ ಅನುದಾನ, ಕ್ರಿಟಿಕಲ್ ಸಹಾಯಧನ ಮುಂತಾದ ಕಾರ್ಯಕ್ರಮಗಳನ್ನು ಯೋಜನೆಯ ಕಾರ್ಯಕ್ರಮವಾಗಿ ಮಾಡುತ್ತಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸಜೀಪ ಮೂಡ ಅಧ್ಯಕ್ಷರಾದ ಹರಿಣಾಕ್ಷಿ ವಹಿಸಿದ್ದರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷರಾದ ರಮೇಶ್, ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶೋಬಿತ್ ಪೂಂಜಾ, ಎ.ಜೆ ಆಸ್ಪತ್ರೆ ಮಂಗಳೂರಿನ ಸಮುದಾಯ ವೈದ್ಯಕೀಯ ವಿಭಾಗದ ಡಾ. ವಾಮನ್ ನಾಯಕ್, ದಂತ ವೈದ್ಯೆ ಡಾ. ಸಿತಾರಾ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಕಾರ್ಯದರ್ಶಿ ಅಶ್ವಿನ್ ಪೂಜಾರಿ ಕಾರಜೆ,ಮೊದಲಾದವರು ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸದಸ್ಯೆ ಶೋಭಿತ ಪ್ರಾರ್ಥಿಸಿದರು, ಜ್ಞಾನ ವಿಕಾಸ ಸಮ್ಮನ್ವಾಧಿಕಾರಿ ಶ್ರುತಿ ಸ್ವಾಗತಿಸಿ, ಪಾಣೆ ಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರ್ಮಿಸಿದರು.
ಯೋಜನೆಯ ಪಾಣೆ ಮಂಗಳೂರು ವಲಯದ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಸಜೀಪಮೂಡ,ಗ್ರಾಮ ಪಂಚಾಯತ್ ಸಜೀಪಮೂಡ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜೀಪಮೂಡ, ಎ.ಜೆ ಆಸ್ಪತ್ರೆ ಮಂಗಳೂರು ಹಾಗೂ ಸಮುದಾಯ ವಿಭಾಗ ಪಾಣೆಮಂಗಳೂರು ಇದರ ಸಹಯೋಗದಲ್ಲಿ ಈ ವೈದ್ಯಕೀಯ ಶಿಬಿರನಡೆಯಿತು.