ಅಮ್ಟೂರು ಶ್ರೀಕೃಷ್ಣ ಮಂದಿರದ ಸುತ್ತ ಗಿಡನಾಟಿ
ಬಂಟ್ವಾಳ: ತಾಲೂಕಿನ ಅಮ್ಟೂರು ಶ್ರೀಕೃಷ್ಣ ಮಂದಿರದ ೨೫ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಆಯೋಜಿಸಲಾದ ೨೫ ಕಾರ‍್ಯಕ್ರಮಗಳ ಪೈಕಿ ೧೩ನೇ ಕಾರ್ಯಕ್ರಮವಾಗಿ ಸಸಿ ನಾಟಿ ಮತ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ‍್ಯಕ್ರಮದ ಪ್ರಯುಕ್ತ ಮಂದಿರದ ಸುತ್ತ ಮುತ್ತ ಸಸಿಗಳನ್ನು ನಾಟಿಮಾಡಲಾಯಿತಲ್ಲದೆ , ಭಾಗವಹಿಸಿದ ಎಲ್ಲರಿಗೂ ಸಸಿಗಳನ್ನು ವಿತರಿಸಿ ತಮ್ಮ ತಮ್ಮ ಮನೆಗಳಲ್ಲಿಯು ಸಸಿಗಳನ್ನು ನೆಟ್ಟು,ಬೆಳೆಸಲು ಪ್ರೇರಣೆ ನೀಡಲಾಯಿತು.
ಈ ಸಂದರ್ಭ ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ, ಉಪಾಧ್ಯಕ್ಷರುಗಳಾದ ಶರತ್ ಕುಮಾರ್, ಮಹಾಬಲ ಕುಲಾಲ್, ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಹಾಗು ಇತರ ಪದಾಧಿಕಾರಿಗಳು, ಸದಸ್ಯರು, ಧರ್ಮಸ್ಥಳ ಸ್ವಸಹಾಯ ಸಂಘದ ಮೇಲ್ವಿಚಾರಕಿ ವನಿತಾ ಉಪಸ್ಥಿತರಿದ್ದರು.