ಶ್ರೀನಾಗಬ್ರಹ್ಮ ಸನ್ನಿಧಿ, ಶ್ರೀಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ: ಬಾಲಾಲಯ ಪ್ರತಿಷ್ಠೆ, ವಿಜ್ಞಾಪನ ಪತ್ರ ಬಿಡುಗಡೆ
ಬಂಟ್ವಾಳ: ತಾಲೂಕಿನ ಕುಮ್ಡೇಲುಶ್ರೀನಾಗಬ್ರಹ್ಮ ಸನ್ನಿಧಿ, ಶ್ರೀಕೋರ್ದಬ್ಬು ದೈವಸ್ಥಾನದ ಪುನರ್ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಬಾಲಾಲಯ ಪ್ರತಿಷ್ಠೆ ಮತ್ತು ವಿಜ್ಞಾಪನ ಪತ್ರ ಬಿಡುಗಡೆ ಸಮಾರಂಭವು ನಡೆಯಿತು. ದೈವಸ್ಥಾನದ ಆಡಳಿತ ಮೋಕ್ತೆಸರರಾದ ಭಾಸ್ಕರ ಚೌಟ ಕುಮ್ಡೇಲು, ಗುರಿಕಾರರಾದ ಮೋನಪ್ಪ , ವೆಂಕಪ್ಪ ಕುಮ್ಡೇಲು ಇವರ ಉಪಸ್ಥಿತಿಯಲ್ಲಿ ಶ್ರೀ ದೈವಗಳ ದರ್ಶನ ಮುಖಾಂತರ ಶ್ರೀಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳನ್ನು ಬಾಲಲಾಯದಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿಉದ್ಯಮಿ,ಧಾರ್ಮಿಕ ನೇತಾರ ಜಗನ್ನಾಥ ಚೌಟ ಮಾಣಿಬದಿಗುಡ್ಡೆ ಅವರು ವಿಜ್ಞಾಪನಾಪತ್ರ ಅನಾವರಣಗೊಳಿಸಿದರು. ದೈವಸ್ಥಾನದಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾದ ಪ್ರಕಾಶಚಂದ್ರ ರೈ ದೇವಸ್ಯ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಸಮಿತಿಯ ಪ್ರಧಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿದೈವಸ್ಥಾನದ ಪುನರ್ ನಿರ್ಮಾಣದ ರೂಪುರೇಷೆ, ಮುಂದಿನ ಕಾರ್ಯಯೋಜನೆಗಳು ಮತ್ತು ಭಕ್ತರ ಸಹಕಾರದ ಬಗ್ಗೆ ಪ್ರಸ್ತಾವಿಸಿದರು.
ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾದ ಉಮೇಶ್ ಸಾಲಿಯಾನ್ ಬೆಂಜನಪದವು, ಕಾರ್ಯಧ್ಯಕ್ಷರುಗಳಾದ ಐತಪ್ಪ ಆಳ್ವ ಸುಜೀರುಗುತ್ತು, ಚಂದ್ರಶೇಖರ ಗಾಂಭೀರ ಫರಂಗಿಪೇಟೆ, ಉಮೇಶ್ ಸುವರ್ಣ ತುಂಬೆ,ಗೌರವ ಸಲಹೆಗಾರರಾದ ಕೃಷ್ಣಕುಮಾರ್ ಪೂಂಜಾ,
ಉಪಾಧ್ಯಕ್ಷಗಳಾದ ರಾಧಾಕೃಷ್ಣ ತಂತ್ರಿ ಪೊಳಲಿ, ಉಮೇಶ್ ಶೆಟ್ಟಿ ಬರ್ಕೆ ಮೊದಲಾದವರು ಉಪಸ್ಥಿತರಿದ್ದರು.. ಪ್ರಧಾನ ಕಾರ್ಯದರ್ಶಿ ಭರತ್ ಕುಮ್ಡೇಲು ಸ್ವಾಗತಿಸಿದರು. ಶರಣ್. ಕೆ. ಭಂಡಾರಿ ವಂದಿಸಿದರು.ರಾಜೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.