ನಂದಾವರ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ
ಬಂಟ್ವಾಳ: ನಂದಾವರ ಚಿಕ್ಕ ಮೇಳವು ತನ್ನ ಐದನೇ ವರ್ಷದ ಮನೆ,ಮನೆಗೆ ಯಕ್ಷಗಾನ ತಿರುಗಾಟಕ್ಕೆ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಗೆಜ್ಜೆಪೂಜೆಯೊಂದಿಗೆ ಪ್ರಥಮ ಸೇವೆ ಆಟಕ್ಕೆ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.
ಸಜೀಪ ಮಾಗಣೆಯ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರು ಮೇಳದ ತಿರುಗಾಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು.ದೇವಳದ ಅರ್ಚಕರಾದ ಉದಯಭಟ್, ಕಿಳಿಂಗ ಶ್ರೀ ಉಳ್ಳಾಲ್ದಿ ದೈವಸ್ಥಾನದ ಆಡಳಿತ ಮುಕ್ತೇಸರರಾದ ಪುಂಡಿಕಾಯಿ ಶಂಕರನಾರಾಯಣ ಭಟ್, ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಅರುಣ್ ಕುಮಾರ್ ಕೆ., ಮೋಹನ ದಾಸ್ ಹೆಗ್ಡೆ ಕೆ.,ಮ್ಯಾನೇಜರ್ ರಾಮಕೃಷ್ಣ, ರಮೇಶ್ ಕುಮಾರ್, ಸೋಮನಾಥ ಚಿಕ್ಕಮೇಳದ ಸಂಚಾಲಕ ಭಾಸ್ಕರ್ ಸರಪಾಡಿ, ಕಲಾವಿದರಾದ ಶಿವಪ್ರಸಾದ್ ಕಾವಲ್ ಕಟ್ಟೆ ,ಕಾರ್ತಿಕ್ ಸರಪಾಡಿ,ಸಂದೀಪ ಕುಲಾಲ್, ಶಿವಪ್ರಸಾದ್ ಕುರಾಯ, ಶಿವಪ್ರಸಾದ್ ಆಚಾರ್ಯ, ಧನಂಜಯ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು