ಮೂಲರಪಟ್ಣ ಜಿಎಚ್‌ಎಂ ಫೌಂಡೇಷನ್ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, ವಿದ್ಯಾರ್ಥಿಗಳಿಗೆ ಸನ್ಮಾನ,ಕಾರ್ಯಾಗಾರ
ಬಂಟ್ವಾಳ: ಜಿಎಚ್‌ಎಂ ಫೌಂಡೇಷನ್ ಮೂಲರ ಪಟ್ಣ ಇದರ ವತಿಯಿಂದ ಬೈತುಲ್‌ಹುದಾ ಏಳನೆ ಯೋಜನೆಯಾಗಿ ನಿರ್ಮಾಣಗೊಳ್ಳುತ್ತಿರುವ ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಮೂಲರ ಪಟ್ನದ ಆಝಾದ್ ನಗರದಲ್ಲಿ ನಡೆಯಿತು.

ಮುಹಿಯುದ್ದೀನ್ ಜುಮ್ಮಾ ಮಸೀದಿ ಮೂಲರಪಟ್ಣ ಇದರ ಖತೀಬರಾದ ಅಲ್ ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ ದುವಾಃ ನೆರವೇರಿಸಿ ನೂತನ ಮನೆಗೆ ಶಂಕು ಸ್ಥಾಪನೆ ನೆರವೇರಿಸಿದರು. ಬಳಿಕ ಶಭಾರ್ಶಿರ್ವಾದಗೈದು ಶೀಘ್ರದಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳಲಿ ಎಂದರು. ಮಾಜಿ ಖತೀಬರಾದ ಅಲ್ ಹಾಜ್ ಅಬ್ದುಲ್ ಖಾದರ್ ಮದನಿ ಉಪಸ್ಥಿತರಿದ್ದರು.
