ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಲೆ ಸೇವೆ
ಬಂಟವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಶತಮಾನಗಳಿಂದ ಅವ್ಯಾಹತವಾಗಿ ನಡೆಸಿಕೊಂಡು ಬರಲಾಗುತ್ತಿರುವ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಲೆ ಸೇವೆಯು ಆಗಸ್ಟ್ 5 ರಿಂದ ಸೆ. 3 ರವರೆಗೆ ನಡೆಯಲಿದೆ.
ತಾಳಮದ್ದಳೆಯು ಸಂಜೆ 6-30 ರಿಂದ 9-30ರವರೆಗೆ ನಡೆಯಲಿದೆ.ಈ ಸೇವೆಯಲ್ಲಿ ಭಾಗವಹಿಸಲಿಚ್ಚಿಸುವ ಯಕ್ಷಗಾನ ಸಂಘ ತಮಗೆ ಅನುಕೂಲವಾದ ಕನಿಷ್ಠ 5 ದಿನಗಳನ್ನು ತಿಳಿಸಿದಲ್ಲಿ ಒಂದು ದಿನವನ್ನು ಆಯ್ಕೆ ಮಾಡಿ ತಿಳಿಸಲಾಗುವುದು. ಯಕ್ಷಗಾನ ಸಾಹಿತ್ಯ ಲಭ್ಯವಿದ್ದು,ಯಾವುದೇ ವೆಚ್ಚ ಕೊಡಲ್ಪಡುವುದಿಲ್ಲ,
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 90719- 23352, 94813 -90149 ಅಥವಾ 94809-73149 ನ್ನು ಸಂಪರ್ಕಿಸಬಹುದೆಂದು ದೇವಳದ ಪ್ರಕಟಣೆ ತಿಳಿಸಿದೆ.