ಸಾರ್ಥಕ ಬದುಕಿಗೆ ಸಂಸ್ಕಾರ ಮತ್ತು ತಿಳುವಳಿಕೆ ನೀಡಬೇಕು: ಮಾಣಿಲಶ್ರೀಗಳು
ಬಂಟ್ವಾಳ: ಹಿರಿಯರು ಮಾಡಿದ ತ್ಯಾಗದ ತಿಳುವಳಿಕೆಯಿಂದ ಅವರ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯವು ನಡೆಯಬೇಕಾಗಿದೆ .ಯುವ ಪೀಳಿಗೆಗೆ ಸಾರ್ಥಕ ಬದುಕನ್ನು ನಡೆಸಲು ಸಂಸ್ಕಾರ ನೀಡುವುದರೊಂದಿಗೆ ನಮ್ಮ ಧಾರ್ಮಿಕ ಆಚರಣೆಗಳು ಮಾನಸಿಕವಾಗಿ ಸತ್ಪರಿಣಾಮ ಬೀರುವಂತೆ ಅನುಷ್ಠಾನವಾಗಬೇಕೆಂದು ಶ್ರೀಧಾಮ ಮಾಣಿಲದ ಪರಮಹಂಸ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದರು.
ಮಾಣಿಲ ಶ್ರೀಧಾಮ ಕ್ಷೇತ್ರದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರೀಯ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ 15ನೇ ಪ್ರತಿಷ್ಠ ವರ್ಧಂತಿಯ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಬಿಡುಗಡೆ ಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ವಹಿಸಿದ್ದರು.
ಪ್ರತಿಷ್ಠಾನದ ಸದಸ್ಯರಾದ ಅನಾರು ಕೃಷ್ಣಶರ್ಮ ಮತ್ತು ಬಾಲಕೃಷ್ಣ ನಾಯಕ್ ಕೋಕಳ ಸ್ವಾಮೀಜಿಯವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಯಂ. ಜಯರಾಮ ಭಂಡಾರಿ ಧರ್ಮಸ್ಥಳ ,ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ , ವಾರಿಜಾ ಸುವರ್ಣ ,ಪುತ್ತೂರು ಘಟಕದ ಚಂದ್ರಶೇಖರ ಆಳ್ವ ಪಡುಮಲೆ,ಭವಾನಿ ಶಂಕರ ಶೆಟ್ಟಿ ಪುತ್ತೂರು, ಸೋಮನಾಥ ಬೇಕಲ್, ಚಂದ್ರಕಲಾ ಎಸ್ ಬೇಕಲ್, ಉದಯಶಂಕರ್ ರೈ ಪುಣಚ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ವಂದಿಸಿದರು. ಪ್ರತಿಷ್ಠಾನದ ಟ್ರಸ್ಟಿ ದುಗ್ಗಪ್ಪ. ಯನ್ ಕಾರ್ಯಕ್ರಮ ನಿರೂಪಿಸಿದರು.