ತುಂಬೆ ಬಸ್ ಡಿಕ್ಕಿ ವೃದ್ದ ಸಾವು
ಬಂಟ್ವಾಳ: ರಸ್ತೆ ದಾಟುತ್ತಿದ್ದ ವೃದ್ದರೋರ್ವರಿಗೆ ಬಸ್ ಡಿಕ್ಕಿಯಾಗಿ ಮೃತ ಪಟ್ಟ ಘಟನೆ ಭಾನುವಾರ ರಾ.ಹೆ.ಯ ತುಂಬೆಯಲ್ಲಿ ನಡೆದಿದೆ.
ತುಂಬೆ ಸಮೀಪದ ಮುದಲ್ಮೆಪಡ್ಪು ನಿವಾಸಿ ಸೇಸಪ್ಪ ಪೂಜಾರಿ (89) ಮೃತಪಟ್ಟ ವರಾಗಿದ್ದಾರೆ.ಮನೆಗೆ ಸಾಮಾನು ತರಲೆಂದು ತುಂಬೆ ಪೇಟೆಗೆ ಬಂದಿದ್ದ ಅವರು ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಡಿಕ್ಕಿಯಾಗಿದೆ.
ಇದರ ರಭಸಕ್ಕೆ ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದು,ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.