ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ ಆಯ್ಕೆ.
ಪೊಳಲಿ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮತ್ತು ಭಕ್ತಾಭಿಮಾನಿಗಳ ಸಭೆಯು ಜೂ ೯ರಂದು ಭಾನುವಾರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ವಸಂತ ಎಂ ಬೆಳ್ಳೂರು ವಹಿಸಿದರು.ಜೀರ್ಣೋದ್ಧಾರದ ಅಧ್ಯಕ್ಷರಾಗಿ ಉದ್ಯಮಿ ಭುವನೇಶ್ ಪಚ್ಚಿನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಪಲ್ಲಿಪಾಡಿ ಆಯ್ಕೆಯಾದರು.
ಸಮಿತಿಯ ಇತರ ಪದಾಧಿಕಾರಿಗಳ ವಿವರ :
ಗೌರವಾಧ್ಯಕ್ಷರಾಗಿ ರಾಜೇಶ್ ನಾಯಕ್ ಉಳಿಪಾಡಿಗುತ್ತು, ರಮಾನಾಥ ರೈ ಬೆಳ್ಳಿಪಾಡಿ ಕಾರ್ಯಾಧ್ಯಕ್ಷರುಗಳಾಗಿ ಉಮೇಶ್ ಸಾಲಿಯಾನ್ ಬೆಂಜನಪದವು, ರಘು ಎಲ್. ಶೆಟ್ಟಿ, ಕೆ. ಗಂಗಾಧರ ಪೂಜಾರಿ ಕೊಪ್ಪಲ, ದೇವಪ್ಪ ಪೂಜಾರಿ ಬಾಳಿಕೆ, ಸಂದೀಪ್ ಸದಾಶಿವ ಬೊಳ್ಳೂರು, ಕಾರ್ಯದರ್ಶಿಗಳಾಗಿ ರೋಶನ್ ಪುಂಚಮೆ, ಯತೀಶ್ ಸಾಣೂರು, ಕೋಶಾಧಿಕಾರಿ ಸಂಕೇತ್ ಈಶನಗರ, ಸಂಘಟನಾ ಕಾರ್ಯದರ್ಶಿಗಲಾಗಿ ಪುಷ್ಪರಾಜ್ ಕಮ್ಮಾಜೆ, ಪ್ರಸನ್ನ ಕುಮಾರ್,ಮಾಧವ ಡಿ. ಬಂಗೇರ,
ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಅರ್ಚಕರಾದ ರಮೇಶ್ ಪೂಜಾರಿ ಬಡಗಬೆಳ್ಳೂರು ಗೃಆಮಗ್ರಾಮ ಪಂಚಾಯತ್ ಅಧ್ಯಕ್ಷರಾದ ರೂಪಾ ನಾರಾಯಣ ನಾಯಕ್, ಗ್ರಾಮ ಪಂ. ಸದಸ್ಯರಾದ ವಸಂತ ಅಂಚನ್, ಮಮತ ಪುರುಸೋತ್ತಮ ಪೂಜಾರಿ , ಪ್ರವೀಣ್ ವರಕೋಡಿ. ಬಾಲಕೃಷ್ಣ ಕುಲಾಲ್, ಉಮೇಶ್ ಪರಿಮೊಗರು, ಜನಾರ್ಧನ ಎಚ್ ಎಸ್, ರಾಜೇಶ್ ಎಂ. ನಿತಿನ್, ದಿನೇಶ್, ಚೈತ್ರಾ ಮೋಹನ್ ದಾಸ್ ಹಾಗೂಭಕ್ತಾಧಿಗಳು ಸಭೆಯಲ್ಲಿ ಭಾಗವಹಿಸಿದ್ದರು
ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಇದರ ಟ್ರಸ್ಟಿಗಳು ಜೀರ್ಣೋದ್ಧಾರ ಸಮಿತಿಯೊಂದಿಗೆ ಸೇರಿ ದೇವಸ್ಥಾನದ ಕೆಲಸಗಳನ್ನು ಆದಷ್ಟು ಶೀಘ್ರದಲ್ಲಿ ಮಾಡುವುದೆಂದು ನಿರ್ಧರಿಸಲಾಯಿತು.
ಶಶಿಕಿರಣ್ ಕೇಪುಲಡ್ಕ ಕಾರ್ಯಕ್ರಮ ನಿರೂಪಿಸಿದರು.