ದಡ್ಡಲಕಾಡು ಶಾಲಾ ಮುಖ್ಯ ಶಿಕ್ಷಕರ ಮೇಲೆ ಆರೋಪಗಳ ಸುರಿಮಳೆ : ವರ್ಗಾವಣೆಗೆ ಆಗ್ರಹಿಸಿ ಶಾಲಾಭಿವೃದ್ಧಿ ಸಮಿತಿಯಿಂದ ಮನವಿ
ಬಂಟ್ವಾಳ:ಇಲ್ಲಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿರುವ ಪ್ರಭಾರ ಮುಖ್ಯ ಶಿಕ್ಷಕರು ರ‍್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು,ಅವರನ್ನು ತಕ್ಷಣ ಶಾಲೆಯಿಂದ ಎತ್ತಂಗಡಿಗೊಳಿಸುವಂತೆ ಆಗ್ರಹಿಸಿದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾಭಿವೃದ್ದಿ ಸಮಿತಿ ಹಾಗೂ ದಡ್ಡಲಕಾಡು ಶ್ರೀ ದರ‍್ಗಾ ಚಾರಿಟೇಬಲ್ ಟ್ರಸ್ಟ್ (ರಿ.) ನ ವತಿಯಿಂದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕರಿಗೆ ಶುಕ್ರವಾರ ಮನವಿ ಮಾಡಲಾಗಿದೆ.

ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರ ಎಡವಟ್ಟಿನಿಂದಾಗಿ ಮಕ್ಕಳ ಸಂಖ್ಯೆಯಲ್ಲಿಯು ಕೊರತೆಯಾಗುವ ಭಯ ಉಂಟಾಗಿದೆಯಲ್ಲದೆ ವಿದ್ಯರ‍್ಥಿಗಳಿಗೆ ಕೀಟಲೆ ಆರಂಭವಾಗಿದ್ದು,ವಿನಾಕಾರಣ ಮಕ್ಕಳ ಮೇಲೆ ಬಲಪ್ರಯೋಗ ಮಾಡುವುದು ,ಅಶ್ಲೀಲ ಪದ ಬಳಕೆ ಮಾಡುವುದು ಕಂಡುಬಂದಿದ್ದು, ಮಕ್ಕಳ ಪೋಷಕರು ಈ ಬಗ್ಗೆ ಶಾಲಾಭಿವೃದ್ದಿ ಸಮಿತಿಗೆ ದೂರು ನೀಡಿದ್ದಲ್ಲದೆ ವಿದ್ಯರ‍್ಥಿಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ವಿಚಾರವನ್ನು ಕೂಡ ಸಮಿತಿಗೆ ತಿಳಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಹಾಗೆಯೇ ಶಾಲಾ ಸಹಶಿಕ್ಷಕ,ಶಿಕ್ಷಕಿಯರೊಂದಿಗೂ ಅಸಭ್ಯವಾದ ರ‍್ತನೆ,ಮಾನಸಿಕ ಕಿರುಕುಳ ನೀಡುವ ಬಗ್ಗೆಯೂ ದೂರುಗಳು ಬಂದಿದೆ. ಶಾಲಾವಧಿಯಲ್ಲು ಶಾಲೆಯಲ್ಲಿರದೆ ವೈಯಕ್ತಿಕ ಸಂಘಸಂಸ್ಥೆಗಳ ಕರ‍್ಯದ ನಿಮಿತ್ತ ಸುತ್ತಾಡುತ್ತಿರುವುದರಿಂದ ಪಾಠದ ಕಡೆ ಗಮನ ನೀಡದೆ ವಿದ್ಯರ‍್ಥಿಗಳು ಕಡಿಮೆ ಅಂಕ ಪಡೆಯಲು ಕಾರಣವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಮುಖ್ಯ ಶಿಕ್ಷಕರ ರ‍್ತನೆಯ ಬಗ್ಗೆ ಅನೇಕ ವಿದ್ಯರ‍್ಥಿಗಳು,ಸಹಶಿಕ್ಷಕರು ಶಾಲಾ ದೂರು ಪೆಟ್ಟಿಗೆಯಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದ್ದು,ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಶಾಲಾಭಿವೃದ್ದಿ ಸಮಿತಿ ಪರಿಶೀಲಿಸಿದಾಗ ಈ ಮುಖ್ಯಶಿಕ್ಷಕರ ಮೇಲಿನ ಆರೋಪ ಧೃಢಪಟ್ಟಿದ್ದು,ಹಾಗಾಗಿ ಶಾಲಾ ಮುಖ್ಯ ಶಿಕ್ಷಕರನ್ನು ರ‍್ಗಾವಣೆಗೊಳಿಸುವಂತೆ ಒತ್ತಾಯಿಸಲಾಗಿದೆ.
ಶಾಲೆಯ ಹಿತದೃಷ್ಟಿಯಿಂದ ಮುಖ್ಯ ಶಿಕ್ಷಕರ ರ‍್ಗಾವಣೆಗೊಳಿಸದಿದ್ದಲ್ಲಿ ಮುಂದಿನ ವಾರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.ಮನವಿಯ ಪ್ರತಿಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರಿಗೂ ಸಲ್ಲಿಸಲಾಗಿದೆ.
ಶ್ರೀ ದರ‍್ಗಾಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದ ನಿಯೋಗಸದಿಕ್ಷಣಾಧಿಕಾರಿಯವರನ್ನುಭೇಟಿಯಾಗಿ ಈ ದೂರು ಸಲ್ಲಿಸಿದೆ.ಈ ಸಂರ‍್ಭ ಪುರುಷೋತ್ತಮ ಅಂಚನ್,ರಾಮಚಂದ್ರ ಪೂಜಾರಿ ಕರೆಂಕಿ ಮೊದಲಾದವರಿದ್ದರು.