ಅಂಗನವಾಡಿ ಕೇಂದ್ರದ ಧ್ವಜಸ್ತಂಭದ ಉದ್ಘಾಟನೆ
ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಸಣ್ಣಕುಕ್ಕು ಹೊಸ ಅಂಗನವಾಡಿ ಕೇಂದ್ರಕ್ಕೆ ನಂದಾದೀಪ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ ಧ್ವಜಸ್ತಂಭವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟನೆಗೈದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಂಜಿನಿ, ಪಂಚಾಯತ್ ಸದಸ್ಯರಾದ ಅಶೋಕ, ಮಲ್ಲಿಕಾ, ಮಮತಾ, ಹಿರಣ್ಯಯ ಪ್ರಭಾರ ಸಿ.ಡಿ.ಪಿ.ಒ ಶೀಲಾವತಿ, ಮೇಲ್ವಿಚಾರಕಿ ಲೀಲಾವತಿ, ನಿವೃತ್ತ ಸಿ.ಡಿ.ಪಿ.ಒ ಗಾಯತ್ರಿ ರವೀಂದ್ರ ಕಂಬಳಿ, ನಂದಾದೀಪ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಸಂತೋಷ್, ಸದಸ್ಯರುಗಳಾದ ಸುರೇಶ್ ಶೆಟ್ಟಿ, ಶರತ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ರುಕ್ಕಯ ವಸಂತಿ, ಭವಾನಿ, ರೇವತಿ, ಕಸ್ತೂರಿ ಜೈನ್, ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ ಮಮತಾ, ಸಹಾಯಕಿ ಸರೋಜ ಉಪಸ್ಥಿತರಿದ್ದರು.