Published On: Sun, Mar 17th, 2024

ಹೊಕ್ಕಾಡಿಗೋಳಿ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ಕಂಬಳಕ್ಕೆ ಧಾರ್ಮಿಕ ನಂಟು: ಕೃಷ್ಣಪ್ರಸಾದ್ ಆಚಾರ್ಯ

ಬಂಟ್ವಾಳ:ಈ ಹಿಂದೆ ಹೊಕ್ಕಾಡಿಗೋಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಕೃಷಿಕರು ಧಾರ್ಮಿಕ ನಂಬಿಕೆಯೊಂದಿಗೆ ಒಂಟಿ ಕರೆಯಲ್ಲಿ ಆರಂಭಿಸಿದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಕಂಬಳವು ಪ್ರಸಕ್ತ ಜೋಡುಕರೆಯಲ್ಲಿ ಹೊನಲು ಬೆಳಕಿನ ಕಂಬಳವಾಗಿ ಪರಿವರ್ತಿಸಿಕೊಂಡು ಮುನ್ನಡೆಯಲು ಗ್ರಾಮಸ್ಥರ ಕೊಡುಗೆ ಅನನ್ಯವಾಗಿದೆ ಎಂದು ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಹೇಳಿದ್ದಾರೆ.

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????


ಇಲ್ಲಿನ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಂಬಳ ಸಮಿತಿ ಕಾಯರ್ಾಧ್ಯಕ್ಷ ಗುಣಪಾಲ ಕಡಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಷ್ಟು ವರ್ಷಗಳ ಕಾಲ ಉಳಿಸಿಕೊಂಡು ಬಂದ ಜಾನಪದ ಕ್ರೀಡೆ ಕಂಬಳ ನಿಲ್ಲಿಸಲು ಮುಂದಾದರೆ ಜನರ ಶಾಪಕ್ಕಿಂತ ದೊಡ್ಡ ದೇವರ ಶಾಪವೂ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟುಗೂಡಿ ಕಂಬಳ ಮುನ್ನಡೆಯುವಂತಾಗಲಿ ಎಂದರು.


ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಪತ್ರಕರ್ತ ಲೀಲಾಕ್ಷ ಕರ್ಕೇರಾ, ಕದ್ರಿ ನವನೀತ ಶೆಟ್ಟಿ ಶುಭ ಹಾರೈಸಿದರು. ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಉಪಾಧ್ಯಕ್ಷೆ ಬೇಬಿ, ಮಾಜಿ ಅಧ್ಯಕ್ಷ ಮಹಾಬಲ ಶೆಟ್ಟಿ, ಮಾಜಿ ಉಪಾಧ್ಯಕ್ಷ ಯೋಗೀಶ ಆಚಾರ್ಯ, ಸದಸ್ಯೆ ಶೋಭಾ, ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು, ಕುಟ್ಟಿ ಶೆಟ್ಟಿ ಹಕ್ಕೇರಿ, ಪಿಡಿಒ ಸ್ಮೃತಿ ನಾಯಕ್, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಗುತ್ತಿಗೆದಾರ ರಾಜೇಶ್ ಗೋವಿಂದಬೆಟ್ಟು, ಮೂಡುಬಿದ್ರೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪುತ್ತಿಗೆಗುತ್ತು ಸಂದೀಪ್ ಸೆಟ್ಟಿ,ಸಚಿನ್ ಅಡಪ ಗುರುಪುರ, ಪ್ರಶಾಂತ್ ಸಾಲ್ಯಾನ್, ಸಮಿತಿ ಪದಾಧಿಕಾರಿಗಳಾದ ಪ್ರಭಾಕರ ಹುಲಿಮೇರು, ರಾಜೇಶ್ ಶೆಟ್ಟಿ ಸಿದ್ದಕಟ್ಟೆ, ಸಂತೋಷ್ ಶೆಟ್ಟಿ ಕೊನೆರೊಟ್ಟು ಗುತ್ತು, ಸತೀಶ್ ಮಠ, ಕೃಷ್ಣಶೆಟ್ಟಿ ಉಮನೊಟ್ಟು, ಸಂತೋಷ್ ಕುಮಾರ್ ಚೌಟ, ಹರೀಶ ಆಚಾರ್ಯ, ಚಂದ್ರಶೇಖರ ಗೌಡ ಕಾರಂಬಡೆ, ಕೆ.ಪರಮೇಶ್ವರ ಪೂಜಾರಿ, ಚಂದ್ರಶೇಖರ ಸಿದ್ದಕಟ್ಟೆ ಮತ್ತಿತರರು ಇದ್ದರು.
ಶಾಸಕರಾದ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ ಪೂಜಾರಿ ಅಳಕೆ ಭೇಟಿ ನೀಡಿದರು.
ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter