ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ಪ್ರಸಕ್ತ ಋತುವಿನ ಪ್ರಥಮ ಕಂಬಳ ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ಎಂಬಲ್ಲಿ 4ನೇ ವರ್ಷದ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ನ.21ರಂದು ಅದ್ದೂರಿಯಾಗಿ ನಡೆಯಲಿದೆ.ನ.21ರಂದು ಬೆಳಿಗ್ಗೆ 8 ಗಂಟೆಗೆ ಪೂಂಜ ಕ್ಷೇತ್ರದ ಕೃಷ್ಣಪ್ರಸಾದ್ ಅಸ್ರಣ್ಣ ಕಂಬಳ ಧ್ವಜಾರೋಹಣ ನೆರವೇರಿಸಲಿದ್ದು, ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಅಧ್ಯಕ್ಷತೆ ವಹಿಸುವರು. ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್ ಕರೆ ಉದ್ಘಾಟಿಸಲಿದ್ದು, ಕನಿಲ ಕುಡುಂಬೂರುಗುತ್ತು ಗುತ್ತಿನಾರ್ ಜಯರಾಮ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದ್ರೆ, ಶರತ್ ಗೋರೆ ವೇಣೂರು, ಯುವರಾಜ್ ಜೈನ್ ಕಲ್ಲಬೆಟ್ಟು, ಡಾ.ಸುದೀಪ್ ಕುಮಾರ್ ಸಿದ್ಧಕಟ್ಟೆ, ಡಾ.ಕೃಷ್ಣಮೂತರ್ಿ ಸಿದ್ಧಕಟ್ಟೆ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ್ ಮತ್ತಿತರ ಗಣ್ಯರು ಭಾಗವಹಿಸುವರು.

ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷರಾದ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ, ಡಾ.ಎಂ.ಮೋಹನ ಆಳ್ವ ಮೂಡುಬಿದ್ರೆ, ಶಾಸಕರಾದ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಬಿ.ಮಂಜುನಾಥ ಭಂಡಾರಿ, ಅಶೋಕ್ ರೈ, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ, ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್ ಮತ್ತಿತರ ಗಣ್ಯರು ಭಾಗವಹಿಸುವರು.
ವಿಶೇಷತೆ:
ಕಳೆದ 3 ವರ್ಷಗಳ ಹಿಂದೆಯಷ್ಟೇ ನಿಮರ್ಾಣಗೊಂಡ ಈ ಸುಸಜ್ಜಿತ ‘ವೀರ-ವಿಕ್ರಮ’ ಜೋಡುಕರೆಯಲ್ಲಿ ಒಟ್ಟು 7 ಕಂಬಳ ನಡೆಸಿದ ಹೆಗ್ಗಳಿಗೆ ಇಲ್ಲಿನ ಕಂಬಳ ಸಮಿತಿಗೆ ಸಲ್ಲುತ್ತದೆ. ಕಳೆದ ಎರಡು ವರ್ಷಗಳಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ನಡೆಸಿದ್ದ ‘ರೋಟರಿ ಕಂಬಳ’ ಸೇರಿದಂತೆ ಕೇವಲ ‘ಒಂದೇ ವರ್ಷದಲ್ಲಿ 3 ಕಂಬಳ’ ನಡೆಸುವ ಮೂಲಕ ಜಿಲ್ಲೆಯಲ್ಲೇ ಗಮನ ಸೆಳೆದಿದೆ. ಇಲ್ಲಿ ಸರ್ವಋತು ಕಂಬಳ ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಕರೆ ನಿಮರ್ಿಸಲಾಗಿದ್ದು, ಮೀಯಾರು ಮತ್ತು ಮೂಡುಬಿದ್ರೆ ಮಾದರಿಯಲ್ಲಿ ನಡೆಯುವ ‘ಕುದಿ ಕಂಬಳ’ ಕೋಣಗಳಿಗೆ ತರಬೇತಿಯೂ ನಡೆಯುತ್ತಿದೆ. ‘ಜಿಲ್ಲೆಯ ಎಲ್ಲಾ ಕಂಬಳ ಸಮಿತಿಗೆ ಸಕರ್ಾರದಿಂದ ತಲಾ ರೂ 5 ಲಕ್ಷ ಮತ್ತು ಕ್ರೀಡಾ ಪ್ರಾಧಿಕಾರದಿಂದ ತಲಾ ರೂ 2ಲಕ್ಷ ಮೊತ್ತದ ಅನುದಾನ ದೊರೆತಿದೆ’ ಎಂದು ಕಂಬಳ ಸಮಿತಿ ಅಧ್ಯಕ್ಷ, ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ.
ಸ್ಥಳೀಯ ಕೃಷಿಕರಾದ ಓಬಯ್ಯ ಪೂಜಾರಿ ಮತ್ತು ಕೊರಗಪ್ಪ ಪೂಜಾರಿ ಇವರ ಸ್ಥಳದಾನ ಸೇರಿದಂತೆ ನೂರಾರು ಮಂದಿ ಯುವಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಕಂಬಳದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಸ್ಥಳದಾನಿಗಳ ನೆರವಿನಲ್ಲಿ ವಾಹನ ನಿಲುಗಡೆಗೆ ಸುಮಾರು 10 ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಮೂರು ಕಡೆಗಳಲ್ಲಿ ಪಾಕರ್ಿಂಗ್ ಸೌಲಭ್ಯ ಒದಗಿಸಲಾಗಿದೆ. ಕೋಣಗಳ ಮಾಲೀಕರು ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಸಿದ್ಧಕಟ್ಟೆ-ಕೊಡಂಗೆ, ಕುದ್ಕೋಳಿ-ಮಾವಿನಕಟ್ಟೆ ಹಾಗೂ ವಾಮದಪದವು-ಮಾವಿನಕಟ್ಟೆ ಮೂಲಕ ಕೊಡಂಗೆ ಸಂಪರ್ಕ ರಸ್ತೆಯೂ ಇದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದಶರ್ಿ ಶಶಿಧರ ಶೆಟ್ಟಿ ಕಲ್ಲಾಪು ತಿಳಿಸಿದ್ದಾರೆ.
ಇಲ್ಲಿನ ಕಂಬಳ ಸಮಿತಿ ಕೇವಲ ಕಂಬಳಕ್ಕೆ ಸೀಮಿತವಾಗದೆ ವಿವಿಧ ಸಮಾಜಮುಖಿ ಚಟುವಟಿಕೆಗಳಿಗೆ ರೂ 2.30 ಲಕ್ಷಕ್ಕೂ ಮಿಕ್ಕಿ ಕೊಡುಗೆ ನೀಡಿದೆ. ಪ್ರತೀ ವರ್ಷ ದೀಪಾವಳಿಗೆ ಕಂಬಳ ಕರೆಯಲ್ಲಿ ಸಾಂಪ್ರದಾಯಿಕ ಹಣತೆ ದೀಪಗಳನ್ನು ಬೆಳಗಿಸುತ್ತಿದ್ದೇವೆ ಎಂದು ಕಂಬಳ ಸಮಿತಿ ಗೌರವ ಸಲಹೆಗಾರ ಕಿರಣ್ ಕುಮಾರ್ ಮಂಜಿಲ ತಿಳಿಸಿದ್ದಾರೆ.
–
ಮೋಹನ್ ಕೆ.ಶ್ರೀಯಾನ್ ರಾಯಿ
