ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ವರ್ಷಾವಧಿಕೋಲ ಹಾಗೂ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆ ನಡೆಯಲಿದೆ.ನ.22 ರಂದು ಸಂಜೆ ಗಂಟೆ 6 ರಿಂದ ಸಾಮೂಹಿ ಪ್ರಾರ್ಥನೆ ಬಳಿಕ ವಿವಿಧ ವೈಧಿಕ ವಿಧಾನಗಳು ನಡೆಯಲಿದೆ.


ನ. 23 ಸೋಮವಾರದಂದು ಬೆಳಗ್ಗೆ ಗಂಟೆ 7 ರಿಂದ ಶ್ರೀ ಸತ್ಯನಾರಾಯಣ ಪೂಜೆ, 10-30ಕ್ಕೆ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆಯನ್ನು ರಾಜ್ಯದ ಮುಜರಾಯಿ ಸಚಿವ ಕೆ.ಎಸ್‌.ಬಸವಂತಪ್ಪ ನೆರವೇರಿಸಲಿದ್ದಾರೆ. ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಯು.ಟಿ.ಖಾದರ್,ಸಂಸದ ಕ್ಯಾ.ಬ್ರಿಜೇಶ್ ಚೌಟ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 6 ಕ್ಕೆ ದೀಪೋಜ್ವಲನ, ಕುಣಿತ ಭಜನೆ  ವಯೋಲಿನ್ ವಾದನ,ರಾತ್ರಿ  8 ರಿಂದ  ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ನ.24 ರಂದು ರಾತ್ರಿ 7-30ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಬಳಿಕ  ಯಕ್ಷಗಾನ ಬಯಲಾಟ ನಡೆಯಲಿದೆ.
ನ. 25ರಂದು ಬೆಳಗ್ಗೆ ಗಂಟೆ 8 ರಿಂದ ನವಕ ಕಲಶ, ಗಣಹೋಮ, ನಾಗತಂಬಿಲ, ಮಧ್ಯಾಹ್ನ 12-30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 2ರಿಂದ ಭಜನಾ ಸಂಕೀರ್ತನೆ,ಸಂಜೆ ಪಣೋಲಿಬೈಲು ಶ್ರೀ ಕೃಷ್ಣ ಮಂದಿರದಲ್ಲಿ ಭಜನಾ ಸಂಕೀರ್ತನೆ ನಂತರ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ, ಸಂಜೆ ಗಂಟೆ 6ರಿಂದ  ‘ಯಕ್ಷಗಾನ ಬಯಲಾಟ, ರಾತ್ರಿ  7-30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10 ರಿಂದ  ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ  10-30ಕ್ಕೆ ಭಂಡಾರ ಮನೆಯಿಂದ ದೈವಗಳ ಭಂಡಾರ ಬಂದ ನಂತರ ವರ್ಷಾವಧಿ ಕೋಲ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

By Suddi9