ಸ್ವಾಮೀಜಿ ನೇತೃತ್ವದಲ್ಲಿ ಬಡ ಮಾತೆಯರಿಗೆ ಸೀರೆ, ಅನ್ನತಟ್ಟೆ ವಿತರಣೆ
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.೧೧ರಂದು ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ೧೫ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಹಾಗೂ ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಅವರು ಬಡ ಮಾತೆಯರಿಗೆ ಸೀರೆ , ಅನ್ನತಟ್ಟೆ ಇತ್ಯಾದಿಗಳನ್ನು ವಿತರಿಸಿ ಮಾತೆಯರಿಗೆ ವಂದಿಸಿದರು.