ಪಾಪ ಕಾರ್ಯ ಮಾಡುವುದನ್ನು ತಡೆಯುವವನೆ ನಿಜವಾದ ಸ್ನೇಹಿತ: ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್
ಕೈಕಂಬ: ಪೊಳಲಿ ತಪೋವನದಲ್ಲಿ ಮಾ.11ರಂದು ಸೋಮವಾರ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ 15ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಮುಖ್ಯ ಅಥಿತಿಯಾಗಿ ಎಂ.ಆರ್.ಜಿ. ಗ್ರೂಪ್ ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿದ್ದರು.
ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮೈಸೂರಿನ ಸಂಚಾಲಕರು ಪೂಜ್ಯ ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಆಗಮಿಸಿ ಆಶೀರ್ವಚನದಲ್ಲಿ ಪಾಪ ಕಾರ್ಯ ಮಾಡುವುದನ್ನು ತಡೆಯುವವನು ಹಾಗೂ ಒಳ್ಳೆಯ ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹಿಸುವವ, ಸೂಪ್ತವಾಗಿರುವ ಸದ್ಗುಣಗಳನ್ನು ಪ್ರಕಾಶವಾಗಲು ಸಹಾಯ ಮಾಡುವವ, ನಮಗೆ ಕಷ್ಟ ಬಂದಾಗ ನಮ್ಮ ಕೈ ಎಂದಿಗೂ ಬಿಡದವನೇ ನಿಜವಾದ ಸ್ನೇಹಿತ ಎಂದರು.