ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ : ಸಾಮೂಹಿಕ ವರದಶಂಕರ ಪೂಜೆ
ಕೈಕಂಬ: ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿಯಲ್ಲಿ ಮಾ.೮ರಂದು ಶುಕ್ರವಾರ ಮಹಾ ಶಿವರಾತ್ರಿಯಂದು ಸಾಮೂಹಿಕ ವರದಶಂಕರ ಪೂಜೆ ನೆರವೇರಲಿದೆ.
ಈ ಸಂದರ್ಭದಲ್ಲಿ ಕೋಡಿಮಜಲು ಕೆ.ಅನಂತ ಪದ್ಮನಾಭ ಉಪಾಧ್ಯಾಯರಿಂದ ವರದಶಂಕರ ಮಹಾತ್ಮೆ ಪುಣ್ಯ ಕಥಾ ಪ್ರವಚನ ನಡೆಯಲಿದೆ ಎಂದು ಶ್ರೀ ಅಖಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.