ಸಜಿಪ ಮುನ್ನೂರಿನಲ್ಲಿ ಬಗೆ ಹರಿಯದ ನೀರಿನ ಸಮಸ್ಯೆ : ಪಿಡಿಒ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ಬಂಟ್ವಾಳ: ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಜನತೆನಿರಂತರವಾಗಿ ನೀರಿನ ಸಮಸ್ಯೆಯು ಎದುರಿಸುತ್ತಿದ್ದರೂ ಇದನ್ನು ಬಗೆಹರಿಸುವಲ್ಲಿ ಪಿಡಿಒ ಅವರು ವಿಫಲವಾಗಿರುವ ಹಿನ್ನಲೆಯಲ್ಲಿ ಗ್ರಾ.ಪಂ.ನ ಎಸ್ ಡಿಪಿಐ ಬೆಂಬಲಿತ ಸದಸ್ಯರು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಾವರದಲ್ಲಿ 3 ಕೊಳವೆ ಬಾವಿ ಇದ್ದು ಅದರಲ್ಲಿ 2 ಕೊಳವೆ ಬಾವಿ ಹದಗೆಟ್ಟಿದೆ. ಉಳಿದ ಒಂದು ಕೊಳವೆ ಬಾವಿಯಿಂದ ಸುಮಾರು ಐನೂರು ಮನೆಗಳಿಗೆ ನೀರು ಪೂರೈಕೆ ಆಗಬೇಕಿರುವುದರಿಂದ ಸಮರ್ಪಕವಾಗಿ ನಂದಾವರ ಪ್ರದೇಶದಲ್ಲಿ ನೀರು ಸರಬರಾಜು ಮಾಡಲಾಗುತ್ತಿಲ್ಲ.
ಹಾಗೆಯೇ ಈ ಪರಿಸರದಲ್ಲಿ ಶಾಲೆ,ಮದರಸಗಳಿದ್ದು,ಪರೀಕ್ಷಾ ಸಮಯವಾದುದರಿಂದ ವಿದ್ಯಾರ್ಥಿಗಳು ಕೂಡ ನೀರಿನ ಸಮಸ್ಯೆ ಎದುರಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಹಲವು ಬಾರಿ ಪಿಡಿಒ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡಿಲ್ಲ. ಪಿಡಿಒ ಮತ್ತು ಗುತ್ತಿಗೆದಾರರ ನಡುವಿನ ವೈಮನಸ್ಸಿನಿಂದಾಗಿ ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ದೂರಲಾಗಿದೆ.
ಪಿಡಿಒ ವಿರುದ್ಧ ಕ್ರಮ ಕೈಗೊಂಡು ಸಜೀಪ ಮುನ್ನೂರು ಗ್ರಾಮದ ನೀರಿನ ಸಮಸ್ಯೆಯನ್ನುಪರಿಹರಿಸುವನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ರಾಯಿಸಲಾಗಿದೆ.
ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಎಸ್ ಡಿ ಪಿ ಐ ಬೆಂಬಲಿತ ಪಂಚಾಯತ್ ಸದಸ್ಯರು ಮತ್ತು ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿಅವರ ನೇತೃತ್ವದ ನಿಯೋಗದ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.