Published On: Wed, Mar 6th, 2024

ಪಾಣೆಮಂಗಳೂರು: ಶ್ರೀ ಭಯಂಕರೇಶ್ವರ ದೇವಸ್ಥಾನದ ಬ್ರಹ್ಮಕಲಶ: ಹೊರೆಕಾಣಿಕೆ‌ ಮೆರವಣಿಗೆ

ಬಂಟ್ವಾಳ: ಪಾಣೆಮಂಗಳೂರು ಹಳೇ ಸೇತುವೆ ಸಮೀಪ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿರುವ ಇತಿಹಾಸ ಪ್ರಸಿದ್ದ ಶ್ರೀ ಭಯಂಕರೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾ ಸಾನಿಧ್ಯ ಗಳ ಪುನ: ಪ್ರತಿಷ್ಠೆ ಹಾಗೂ ಸದಾಶಿವ ದೇವರಿಗೆ ಸಹಿತ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಮಂಗಳವಾರ ಸಂಜೆ ನಡೆಯಿತು.

ನರಿಕೊಂಬು ದೊಂಪದಬಳಿಯ ನಾಲ್ಕೆತ್ತಾಯ ದೈವಸ್ಥಾನದಿಂದ ಹೊರಟ ಮೆರವಣಿಗೆ ನರಿಕೊಂಬು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಿಂದ ಕುರ್ಚಿಪಲ್ಲ, ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ, ಪಾಣೆಮಂಗಳೂರು ಶ್ರೀ ವೀರವಿಠಲ ದೇವಸ್ಥಾನದಿಂದ ಶ್ರೀ ಭಯಂಕೇಶ್ವರ ಸದಾಶಿವ ಕ್ಷೇತ್ರಕ್ಕೆ ತಲುಪಿತು. ಹನುಮಂತನ ಟ್ಯಾಬ್ಲೊ ಸಹಿತ ವಿವಿಧ ಸ್ತಬ್ದಚಿತ್ರಗಳು, ಚೆಂಡೆ ಸಹಿತ ಆಕರ್ಷಕ ಪ್ರದರ್ಶನಗಳೊಂದಿಗೆ ಸ್ಥಳೀಯ ಪ್ರಮುಖರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪಪ್ರಜ್ವಲನಗೈದು ಮೆರವಣಿಗೆಗೆ ಚಾಲನೆ‌ ನೀಡಿದರು. ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಎರಕಳ, ಬ್ರಹ್ಮಕಲಶ ಮಹೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್‌, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಾರ್ಯದರ್ಶಿ ಪದ್ಮನಾಭ ಮಯ್ಯ ಏಲಬೆ, ಸಂಚಾಲಕರಾದ ಪ್ರಕಾಶ್ ಕಾರಂತ ನರಿಕೊಂಬು, ಕೋಶಾಧಿಕಾರಿ ಕೆ.ಶಂಕರನಾರಾಯಣ ರಾವ್‌, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಘು ಸಫಲ್ಯ, ಕಾರ್ಯದರ್ಶಿ ಲೋಕೇಶ್ ಕೆ. ನರಹರಿನಗರ, ಸದಸ್ಯರಾದ ಮೋಹನ ಆಚಾರ್ಯ, ಚಂದ್ರಾವತಿ ರತ್ನಾಕರ ನಾಯ್ಕ, ಕೃಷ್ಣಪ್ಪ ಗಾಣಿಗ, ಸಂಜೀವ ಸಪಲ್ಯ, ಪ್ರಮುಖರಾದ ನಾರಾಯಣ ಸೋಮಯಾಜಿ, ಪುರುಷೋತ್ತಮ ಸಾಲಿಯಾನ್, ಸಂತೋಷ್ ಕುಮಾ‌ರ್, ಪ್ರೇಮನಾಥ ಶೆಟ್ಟಿ ಅಂತರ, ಶ್ರೀಷ ರಾಯಸ, ವಸಂತ ಪಿ, ಭುವನೇಶ್ ಪಚ್ಚಿನಡ್ಕ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಪ್ರಕಾಶ್ ಕೋಡಿಮಜಲು, ಪ್ರವೀಣ್ ಕುಮಾ‌ರ್, ಪುರುಷೋತ್ತಮ ಬಂಗೇರ, ಕಿಶೋರ್ ಶೆಟ್ಟಿ, ಮೋಹನದಾಸ ಕೊಟ್ಟಾರಿ, ಕಮಲಾಕ್ಷ ಶಂಭೂರು ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು‌ ಈಗಾಗಲೇ ಆರಂಭಗೊಂಡಿದ್ದು 8 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಮಾ. 8 ರಿಂದ 12 ರವರೆಗೆ ಜಾತ್ರಮಹೋತ್ಸವ ನಡೆಯಲಿದೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter