ಪೆರಾಜೆ: ನೂತನ ಹಿಂದೂ ರುದ್ರ ಭೂಮಿಯ ಲೋಕಾರ್ಪಣೆ
ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮದ ಮಡಲ ಎಂಬಲ್ಲಿ ನೂತನವಾಗಿ ನಿರ್ಮಾಣವಾದ “ಹಿಂದೂ ರುದ್ರ ಭೂಮಿ – ಮೋಕ್ಷಧಾಮ”ದ ಲೋಕಾರ್ಪಣೆಯು ಸೋಮವಾರ ನಡೆಯುವ ಮೂಲಕ ಇಲ್ಲಿಯ ಜನರ ಬಹುಕಾಲದ ಬೇಡಿಕೆಯೊಂದು ಈಡೇರಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರುಧ್ರಭೂಮಿಯ ನಿರ್ಮಾಣ ಅಗತ್ಯವಾಗಿದೆ.
ಗ್ರಾಮಕ್ಕೊಂದು ಮೋಕ್ಷಧಾಮ ಅನಿವಾರ್ಯವಾಗಿದ್ದು, ಈ ಮೋಕ್ಷಧಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರಲ್ಲದೆ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮಸ್ಥರು ಕೂಡ ಸಹಕರಿಸಬೇಕೆಂದರು.
ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಾಲ ಎಂ.ಪೆರಾಜೆ, ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಮಾಧವ ಕುಲಾಲ್ , ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿ ಕುಮಾರಿ, ಸದಸ್ಯರಾದ ಸುನಿತಾ, ಹರೀಶ್ಚಂದ್ರ ರೈ, ರೋಹಿಣಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶಾರಾದ, ಪೆರಾಜೆ ಗ್ರಾಮದ ಹಿರಿಯರಾದ ಬಿ. ಟಿ ನಾರಾಯಣ ಭಟ್, ಜಯರಾಮ ರೈ, ಶ್ರೀ ಕಾಂತ ಆಳ್ವ ಪೆರಾಜೆ ಗುತ್ತು, ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಶ್ರೀನಿವಾಸ ಪೂಜಾರಿ ಪೆರಾಜೆ, ರಾಘವ ಗೌಡ ಏನಾಜೆ, ದೇಜಪ್ಪ ಪೂಜಾರಿ ಬಡೆಕೋಡಿ, ನಾರಾಯಣ ನಾಯ್ಕ ಪಾಲ್ಯ ಪೆರಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ, ಕಾರ್ಯದರ್ಶಿ ನಾರಾಯಣ ನಾಯ್ಕ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.