ಸಹರಾ ಸಮೂಹ ವಿದ್ಯಾ ಸಂಸ್ಥೆಯ ಆಂಗ್ಲ ಮಾಧ್ಯಮ ಮತ್ತು ಪಿಯು ಕಾಲೇಜಿನ ಪ್ರತಿಭಾ ಪ್ರದರ್ಶನ
ಕೈಕಂಬ: ಸಹರಾ ಸಮೂಹ ವಿದ್ಯಾ ಸಂಸ್ಥೆಯಾದ ಸಹರಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಹರಾ ಪಿಯು ಕಾಲೇಜಿನ ಪ್ರತಿಭಾ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭವು ದ.30ರಂದು ಬೆಳಗ್ಗೆ 9.30ಕ್ಕೆ ಸಹರಾ ಆಂಗ್ಲ ಮಾಧ್ಯಮ ಶಾಲೆ ಅಡ್ಡೂರಿನಲ್ಲಿ ಜರಗಲಿರುವುದು ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಪಿ ಇಬ್ರಾಹಿಂ, ಸಂಚಾಲಕ ಎ.ಕೆ ಇಸ್ಮಾಯಿಲ್ ಮತ್ತು ಪ್ರಾಂಶುಪಾಲ ಕೇಶವ ಎಚ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.